ಪ್ರಯತ್ನವೇ ಜೀವನದ ಯಶಸ್ಸು : ರೊ.ಪ್ರತಾಪ್ ಸಿಂಹ ನಾಯಕ್

ಉಜಿರೆ : ಪ್ರಯತ್ನ ಇಲ್ಲದೇ ಜೀವನದಲ್ಲಿ ಯಶಸ್ಸು ದೊರೆಯುವುದಿಲ್ಲ, ತಯಾರಿಯು ಕೂಡ ಯಶಸ್ಸಿನ ಬಹಳ ದೊಡ್ಡ ಭಾಗ, ಪ್ರತಿಯೊಂದು ಯಶಸ್ಸಿನ ಹಿಂದೆ ಬಹಳ ದೊಡ್ಡ ತಪಸ್ಸಿರುತ್ತದೆ ಎಂದು ಬೆಳ್ತಂಗಡಿಯ ಖ್ಯಾತ ಹಿರಿಯ ವಕೀಲ ರೊ.ಪ್ರತಾಪ್ ಸಿಂಹ ನಾಯಕ್ ಅಭಿಪ್ರಾಯಪಟ್ಟರು
ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಮೋಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಮ್. ಜನಾರ್ಧನ್ ಅಧ್ಯಕ್ಷೆತಯನ್ನು ವಹಿಸಿದ್ದರು, ನಿರ್ದೇಶಕ ವಿನಯ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಅನಸೂಯ ವಂದಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ೨೬ ಶಿಭಿರಾರ್ಥಿಗಳು ಮೋಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.