HomePage_Banner_
HomePage_Banner_

ಉಜಿರೆಯಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಪದಗ್ರಹಣ.

ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ಇದರ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.5 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.

ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ರೊ| ಪಿ.ಪಿ ಜೋಸೆಫ್ ಮ್ಯಾಥ್ಯು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ವಲಯ 4 ರ ಸಹಾಯಕ ಗವರ್ನರ್ ಎನ್. ಪ್ರಕಾಶ ಕಾರಂತ, ಝೋನಲ್ ಲೆಫ್ಟನೆಂಟ್ ರೊ| ಡಾ| ಸುಧೀರ್ ಪ್ರಭು, ಕಾರ್ಯದರ್ಶಿ ರಾಜೇಂದ್ರ ಕಾಮತ್,ಮಾಜಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಬುಲೆಟಿನ್ ಸಂಪಾದಕ ಡಾ| ಶರತ್ ಟಿ.ಕೆ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಳ್ತಂಗಡಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ರೋ| ಜಗದೀಶ್ ಪ್ರಸಾದ್ ,ನೂತನ ಕಾರ್ಯದರ್ಶಿ  ರೋ| ರಾಜೇಂದ್ರ ಕಾಮತ್ ,ಕೋಶಾಧಿಕಾರಿ ರೋ| ಸುನಿಲ್ ಶೆಣೈ, ಸಾರ್ಜೆಂಟ್ ಎಟ್. ಆರ್ಮ್ಸ್ ರೋ| ಶರತ್‌ಕೃಷ್ಣ ಪಡ್ವೆಟ್ನಾಯ, ಡೈರೆಕ್ಟರ್‍ಸ್- ಕ್ಲಬ್ ಸೇವೆ ರೋ| ಡಾ. ಶ್ರೀಹರಿ ಭಟ್, ವೃತ್ತಿಪರ ಸೇವೆ ರೋ|ಯೋಗೀಶ್ ಭಿಡೆ, ಸಮುದಾಯ ಸೇವೆ ರೋ| ದಯಾನಂದ ನಾಯಕ್, ಅಂತರಾಷ್ಟ್ರೀಯ ಸೇವೆ ರೋ|ಡಾ|ರಾಘವೇಂದ್ರ ಪಿದಮಲೆ, ಯೂತ್ ಸರ್ವೀಸ್ ರೋ|ಧನಂಜಯ ರಾವ್ ಬಿ.ಕೆ, ಬುಲೆಟಿನ್ ಎಡಿಟರ್ ರೋ|ಶರತ್ ಟಿ.ಕೆ, ಚಯರ್‌ಮೇನ್- ಟಿ.ಆರ್.ಎಫ್ ರೋ|ಮೇ| ಜ| ಎಂ.ವಿ. ಭಟ್, ಪಲ್ಸ್‌ಪೋಲೀಯೋ ರೋ|ಡಾ. ಗೋವಿಂದ ಕಿಶೋರ್, ಲಿಟ್ರೆನ್ಸಿ ರೋ|ಬಾಬು ಪೂಜಾರಿ, ವಿನ್ಸ್ ರೋ|ಡಾ. ಶಶಿಕಾಂತ್ ಡೋಂಗ್ರೆ, ಆರ್‌ಸಿಸಿ ರೋ|ಯಶವಂತ ಪಟವರ್ಧನ್ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.