ಮೊಗ್ರು: ಕೇಸಿಗೊಳಗಾಗುವ ಭೀತಿಯಿಂದ ಯುವಕ ಆತ್ಮಹತ್ಯೆಗೆ ಶರಣು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೊಗ್ರು : ನಕಲಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಗೊಳಗಾಗಿ ಕೇಸಿಗೆ ಸಿಲುಕುವ ಭಯದಿಂದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಅಜಿಕುರಿ ಮನೆ ನಿವಾಸಿ ಕುಶಾಲಪ್ಪ ಗೌಡರ ಪುತ್ರ ಮನೋಜ್ (22ವ.) ಎಂಬವರು ಪಕ್ಕದ ತೋಟದಲ್ಲಿ ಆತ್ಮಹತ್ಯೆಗೈದುಕೊಂಡ ಘಟನೆ ಜೂ. 29 ರಂದು ರಾತ್ರಿ ವೇಳೆ ನಡೆದಿದೆ.
ಲಭ್ಯ ಮಾಹಿತಿ ಪ್ರಕಾರ ಮಂಗಳೂರಿನ ಸಂಸ್ಥೆಯೊಂದರಿಂದ ನಕಲಿ ಅಂಕಪಟ್ಟಿ ಪಡೆಯಲು ಮನೋಜ್ 25 ಸಾವಿರ ರೂ. ಮುಂಗಡ ಹಣ ಪಾವತಿಸಿದ್ದರು. ಈ ನಡುವೆ ಪೊಲೀಸ್ ದಾಳಿಯೊಂದರಲ್ಲಿ ಮಂಗಳೂರು ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಯ ಮುಂದುವರಿದ ಭಾಗವಾಗಿ ಆರೋಪಿಗಳ ನಡುವಿನ ಫೋನ್ ಸಂಪರ್ಕದಲ್ಲಿರುವವರ ಬಗ್ಗೆ ನಿಗಾ ಇರಿಸಿದ್ದಾಗ ಸಿಕ್ಕಿದ ಮಾಹಿತಿಯಂತೆ ಉಳ್ಳಾಳ ಪೊಲೀಸರು ಮನೋಜ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡಿದ್ದರು. ಈ ವೇಳೆ ಆರೋಪಿಗಳ ಜೊತೆ ಮನೋಜ್ ನಡೆಸಿದ ಫೋನ್ ಸಂಭಾಷಣೆಯ, ಬಗ್ಗೆ ಮಾಹಿತಿ ಪಡೆದುಕೊಂಡರು. ಇದರಿಂದ ಭಯಗೊಂಡ ಮತ್ತು ಮುಂದಕ್ಕೆ ಕೇಸಿಗೆ ಒಳಗಾಗುವ ಭೀತಿ ಎದುರಿಸಿದ ಮನೋಜ್ ಮನೆಗೆ ಬಂದವರೇ ಗೋಪಾಲ ಗೌಡ ಎಂಬವರ ಅಡಿಕೆ ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ. ಮೃತರ ಮನೆಗೆ ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಬಿ.ಕೆ. ಸಹಿತ ಹಲವರು ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತದೇಹದ ಮರಣೋತ್ತರ ಪರೀಕ್ಷೆ ಇತ್ಯಾಧಿ ಪ್ರಕ್ರೀಯಯಲ್ಲಿ ಉಳಿಯ ಸುಬ್ರಹ್ಮಣ್ಯ ಭಟ್ ಅವರು ನೆರವು ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.