ಮನೋಶಾಸ್ತ್ರ ವೈದ್ಯಕೀಯ ಪದವಿ ಡಾ| ಅವಿನಾಶ್ ಜೋ ಪ್ರಥಮ ಶ್ರೇಣಿ.

Advt_NewsUnder_1
Advt_NewsUnder_1

ಮಡಂತ್ಯಾರು : ಮಂಗಳೂರು ಫಾದರ್‍ಸ್ ಮುಲ್ಲರ್‍ಸ್ ಮೆಡಿಕಲ್ ಕಾಲೇಜಿನಲ್ಲಿ ಮನೋರೋಗ ವಿಷಯದಲ್ಲಿ ಎಂ.ಡಿ.ಯನ್ನು ಮಾಡುತ್ತಿದ್ದ ಮಡಂತ್ಯಾರಿನ ನಿವಾಸಿ ಡಾ| ಅವಿನಾಶ್ ಜೋ ಅವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ತಾಲೂಕಿನಲ್ಲಿ ಈ ವಿಷಯದಲ್ಲಿ ಉನ್ನತ ಪದವಿ ಪಡೆದ ಪ್ರಥಮ ವೈದ್ಯರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಡಂತ್ಯಾರಿನ ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ಪಬ್ಲೀಕ್ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದ ಅವಿನಾಶ್ ಜೋ ಅವರು ನಂತರ ಮಡಂತ್ಯಾರು ಸೇಕ್ರೇಡ್ ಹಾರ್ಟ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು. ಆಳ್ವಾಸ್ ಮೂಡಬಿದ್ರೆಯಲ್ಲಿ ಪಿಯುಸಿ ಶಿಕ್ಷಣದ ಬಳಿಕ ಸಿಇಟಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 707 ರ್‍ಯಾಂಕ್ ಗಳಿಸಿ ಕೆ.ಎಂ.ಸಿ. ಮಂಗಳೂರಿನಲ್ಲಿ ಎಂ.ಬಿ.ಬಿ.ಎಸ್ ವೈದ್ಯಕೀಯ ಪದವಿ ಪಡೆದುಕೊಂಡರು. ಕೆಲ ತಿಂಗಳುಗಳ ಕಾಲ ಕೆ.ಎಂ.ಸಿ ಮಂಗಳೂರಿನಲ್ಲಿ ನ್ಯೂರೋಲಾಜಿ ವಿಭಾಗದಲ್ಲಿ ಸೇವೆ ಸಲ್ಲಿಸಿದ ಇವರು ನಂತರ ಕಾಮೇಡ್‌ಕೆ ಪರೀಕ್ಷೆಯಲ್ಲಿ ಆಯ್ಕೆಯಾಗಿ ಮಂಗಳೂರಿನ ಫಾದರ್ ಮುಲ್ಲರ್‍ಸ್ ಆಸ್ಪತ್ರೆಯಲ್ಲಿ ಮನೋರೋಗ ವಿಷಯದಲ್ಲಿ ಎಂ.ಡಿ. ಪದವಿಗೆ ಸೇರಿ, ಇದೀಗ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ತಾಲೂಕಿನ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ್ದಾರೆ. ಇವರು ಕಿನ್ನಿಗೋಳಿ ಶಿರ್ವಾ ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲ ಪ್ರೋ. ರಾಜನ್ ವಿ.ಎನ್. ಮತ್ತು ಮಡಂತ್ಯಾರು ಸೇಕ್ರೇಡ್ ಹಾರ್ಟ್ ಪದವಿ ಕಾಲೇಜಿನ ಕಾಮರ್ಸ್ ವಿಭಾಗದ ಮುಖ್ಯಸ್ಥೆ ಪ್ರೋ. ಆಗ್ನೇಸ್ ರೊಡ್ರಿಗಸ್ ದಂಪತಿಯ ಪುತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.