HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶಿಶಿರ ಪ್ರತಿಷ್ಠಾನದ ವತಿಯಿಂದ ನೆತ್ತರ ಶಾಲೆಗೆ 25 ಸಾಗುವಾನಿ ಗಿಡಗಳ ಹಸ್ತಾಂತರ

ನೆತ್ತರ; ಮಚ್ಚಿನ ಗ್ರಾಮದ ಸರಕಾರಿ ಕಿ. ಪ್ರಾ. ಶಾಲೆ ನೆತ್ತರದಲ್ಲಿ ಶಿಶಿರ್ ಪ್ರತಿಷ್ಠಾನ ಮಡಂತ್ಯಾರ್‌ನ ಸಹಯೋಗದೊಂದಿಗೆ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಭೂಮಾಪಕ ನವೀನ್ ಕುಮಾರ್ ಊರ್ಲಬೆಟ್ಟು ಇವರು ಶಿಶಿರ್ ಪ್ರತಿಷ್ಠಾನದ ಮೂಲಕ ನೆತ್ತರ ಶಾಲೆಗೆ 25 ಸಾಗುವಾನಿ ಗಿಡಗಳನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮಾನಾಥ ಪೂಜಾರಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಚ್ಚಿನ ಗ್ರಾ.ಪಂ. ಸದಸ್ಯ ಪ್ರಮೋದ್ ಕುಮಾರ್, ಪ್ರತಿಷ್ಠಾನದ ಕಾರ್ಯದರ್ಶಿ ನಾಗೇಶ್ ಮಧ್ವ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ, ಉಪಾಧ್ಯಕ್ಷೆ ವಿಶಾಲಾಕ್ಷಿ ಶೆಟ್ಟಿ, ವಿಖೇಶ್ ಮಾನ್ಯ, ಸ್ಥಳೀಯರಾದ ಮೋಹನ್‌ದಾಸ್ ಶೆಟ್ಟಿ, ಮಹಾಬಲ ದೇವಾಡಿಗ, ಚಂದ್ರ ಪೂಜಾರಿ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ, ವರದಿ: ಸೀತಾರಾಮ ನೆತ್ತರ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.