ನೇಣು ಬಿಗಿದು ಮಹಿಳೆ ಆತ್ಮಹತ್ಯೆ.

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಕುವೆತ್ಯಾರು ರಂಜಿತ್‌ರವರ ಪತ್ನಿ ಶ್ರೀಮತಿ ದಿವ್ಯಾ(24 ವ) ತನ್ನ ತಾಯಿ ಮನೆ ಮೂಡಬಿದಿರೆಯ ಪುಚ್ಚೆಮೊಗರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.3 ರಂದು ವರದಿಯಾಗಿದೆ.
ಇವರಿಗೆ ಮೂರು ತಿಂಗಳ ಹೆಣ್ಣು ಮಗುವಿದ್ದು, ಬಾಣಂತಿ ಹಿನ್ನಲೆಯಲ್ಲಿ ಇವರು ಪುಚ್ಚೆಮೊಗರಿನ ಶಾಂತಿರಾಜ ಕಾಲನಿಯಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದರು. ಮಗುವಿಗೆ ಹಾಲು ಉಣಿಸಲು ಎದೆ ಹಾಲಿನ ಕೊರತೆ ಇದ್ದುದರಿಂದ ಈ ಬಗ್ಗೆ ಅವರು ಆಗಾಗ್ಗೆ ತನ್ನ ತಾಯಿ ಜೊತೆ ಹೇಳಿ ಬೇಸರ ಪಡುತ್ತಿದ್ದರೆನ್ನಲಾಗಿದೆ.
ಜು.3 ರಂದು ಮಧ್ಯಾಹ್ನ ಮನೆಗೆ ಸಾಮಾನು ತರಲೆಂದು ಅವರ ತಾಯಿ ಸಿದ್ಧಕಟ್ಟೆಗೆ ಹೋಗಿದ್ದ ಸಂದರ್ಭದಲ್ಲಿ ಏಕಾಂಗಿಯಾಗಿದ್ದ ದಿವ್ಯಾ ಅವರು ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ವಾಪಾಸ್ಸು ಬರುವಾಗ ಮನೆಗೆ ಬಾಗಿಲು ಹಾಕಿದ್ದು ಒಳಗಡೆ ಮಗು ಅಳುತ್ತಿತ್ತು. ಕೂಗಿ ಕರೆದರೂ ದಿವ್ಯ ಬಾಗಿಲು ತೆರೆಯದಿದ್ದಾಗ ಆತಂಕಕ್ಕೊಳಾದ ಮನೆಯವರು ಸ್ಥಳೀಯರ ನೆರವಿನಿಂದ ಮನೆಯ ಹಂಚು ತೆಗೆದು ನೋಡಿದಾಗ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಅವರು ಖಿನ್ನತೆಯಿಂದ ಈ ಕೃತ್ಯ ಎಸಗಿರಬಹುದೆಂದು ಸಂಶಯಿಸಲಾಗಿದೆ. ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.