ಉಜಿರೆ ಅಣ್ಣು ಮೊಗೇರ ಕೊಲೆ ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಅಣ್ಣು ಮುಗೇರಾ                                                                  ಆರೋಪಿಗಳಾದ ಗಿರೀಶ್ ಮತ್ತು ವೆಂಕಟೇಶ

ಉಜಿರೆ: ಜಾಗದ ತಕರಾರೊಂದಕ್ಕೆ ಸಂಬಂಧಿಸಿದಂತೆ ಉಜಿರೆ ಗ್ರಾಮದ ಕಾಲನಿ ನಿವಾಸಿ ಬಾಬು ಮುಗೇರ ಮತ್ತು ಕಮಲಾ ದಂಪತಿ ಪುತ್ರ, ಮೇಸ್ತ್ರಿಯಾಗಿದ್ದ ಅಣ್ಣು ಮೊಗೇರ (36ವ.) ಅವರನ್ನು2016 ನ. 30 ರಂದು ರಾತ್ರಿ ಉಜಿರೆ ಎಸ್.ಆರ್ ಬಾರ್ ಎದುರು ರಾತ್ರಿ ಚೂರಿಯಿಂದ ಇರಿದು ಕೊಂದ ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಇದೇ ಕಾಲನಿಯ ನಿವಾಸಿ, ಮೃತ ಅಣ್ಣು ಮೊಗೇರ ಅವರ ದೂರದ ಸಂಬಂಧಿಯೂ ಆಗಿರುವ ಉಜಿರೆ ಅರಿಪ್ಪಾಡಿ ನಿವಾಸಿಗಳಾದ ಗಿರೀಶ್(28 ವ.) ಮತ್ತು ಅವರ ಮಿತ್ರ, ಇದೇ ಕಾಲನಿ ನಿವಾಸಿ ವೆಂಕಟೇಶ್ (28 ವ.) ಅವರೇ ಇದೀಗ ಈ ಕೃತ್ಯದಲ್ಲಿ ಅಪರಾಧಿಗಳೆಂದು ಸಾಬೀತಾದವರು.
ಘಟನೆ ಬಗ್ಗೆ ಅಂದಿನ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರು ಆರೋಪಿಗಳನ್ನು ಕೇವಲ 4 ಗಂಟೆಯ ಅಂತರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ವಿಚಾರಣೆ ಕೈಗೊಂಡ ಜಿಲ್ಲಾ ಸತ್ರ ನ್ಯಾಯಾಧೀಶ ನೇರಳೆ ವೀರಭದ್ರಯ್ಯ ಭವಾನಿ ಅವರು 19 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದರು. ಈ ಪೈಕಿ 4 ಮಂದಿ ಪ್ರತ್ಯಕ್ಷದರ್ಶಿಗಳನ್ನೂ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಎಲ್ಲಾ ಸಾಕ್ಷಿದಾರರ ಹೇಳಿಕೆಯಿಂದ ಕೊಲೆ ಕೃತ್ಯ ಸಾಬೀತಾಗಿದ್ದು ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ ಮೃತ ಅಣ್ಣು ಅವರ ಪತ್ನಿ ಮತ್ತು ಮಗುವಿಗೆ ಪರಿಹಾರ ನಿಧಿಯಿಂದ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಲು ಅರ್ಹತೆ ಇದೆ ಎಂದೂ ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಹರಿಶ್ಚಂದ್ರ ಉದ್ಯಾವರ ಮೃತರ ಪರ ವಾದಿಸಿದ್ದರು.
ಘಟನೆಯ ವಿವರ:
ಅಣ್ಣು ಮುಗೇರ ಅವರು ವಿವಾಹಿತರಾಗಿದ್ದು ನಾಲ್ಕು ತಿಂಗಳ ಗಂಡು ಮಗು ಹೊಂದಿದ್ದರು. ಸಹೋದರಿಯ ಮಗುವಿಗೆ ಚಾಕಲೇಟ್ ತರಲೆಂದು ಎಸ್. ಅರ್ ಬಳಿ ಇದ್ದ ಗೂಡಂಗಡಿಗೆ ಬಂದಿದ್ದ ವೇಳೆ ಧ್ವೇಷದಿಂದ ಕೃತ್ಯಕ್ಕೆ ಹೊಂಚುಹಾಕಿದ್ದ ಗಿರೀಶ್ ಮತ್ತು ವೆಂಕಟೇಶ್ ಅವರು ಅಣ್ಣು ಮೊಗೇರ ಅವರನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದರು.
ಕೊಲೆಯಾಗಿರುವ ಅಣ್ಣು ಮೊಗೇರ ಮತ್ತು ಆರೋಪಿ ಗಿರೀಶ್ ಕುಟುಂಬದ ಮಧ್ಯೆ ಜಾಗದ ವಿವಾದವೊಂದು ಕಳೆದ ೨೫ ವರ್ಷಗಳಿಂದಲೂ ಇದ್ದು, ಹೈಕೋರ್ಟ್‌ವರೆಗೂ ಹೋಗಿತ್ತು. ಇದರ ಪ್ರಕ್ರೀಯೆಯಲ್ಲಿ ತೊಡಗಿಸಿಕೊಂಡಿದ್ದ ಅಣ್ಣು ಮೊಗೇರ ಅವರನ್ನು ಕೊಲೆಗೈಯ್ಯಲು ಸಂಚು ರೂಪಿಸಿದ್ದ ಆರೋಪಿಗಳು ವ್ಯವಸ್ಥಿತವಾಗಿ ಕೃತ್ಯವೆಸಗಿದ್ದರು. ಅಂದು ಕೊಲೆಯಾಗಿದ್ದ ಅಣ್ಣು ಮೊಗೇರ ಅವರಿಗೆ ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದಿಂದ 2004 ರಲ್ಲಿ ಸೌಮ್ಯಾ ಅವರ ಜೊತೆ ವಿವಾಹವಾಗಿದ್ದು, ದಂಪತಿಗೆ ಆಗ ಅವಿನಾಶ್ ಎಂಬ 4 ತಿಂಗಳ ಮಗು ಇತ್ತು. ಹೆರಿಗೆಗಾಗಿ ತವರು ಮನೆಗೆ ಹೋಗಿದ್ದವರು ಕೊಲೆ ನಡೆದ ದಿನವಷ್ಟೇ ಪತಿ ಮನೆಗೆ ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.