ಜ್ವರ ಮತ್ತು ಅಪಸ್ಮಾರ ಕಾಯಿಲೆಯಿಂದ ವಿದ್ಯಾರ್ಥಿ ಇಮ್ರಾನ್ ಸಿ ಮೃತ್ಯು.

ಗುರುವಾಯನಕೆರೆ: ಇಲ್ಲಿನ ಸರಕಾರಿ ಪ್ರೌಢ ಶಾಲಾ 8 ನೇ ತರಗತಿ ವಿದ್ಯಾರ್ಥಿ ಇಮ್ರಾನ್ ಸಿ (13 ವ.)ತೀವ್ರ ಜ್ವರ ಮತ್ತು ಅಪಸ್ಮಾರ (ಫಿಡ್ಸ್) ರೋಗಕ್ಕೆ ತುತ್ತಾಗಿ ಜು. 1 ರಂದು ಮಧ್ಯರಾತ್ರಿ ನಿಧನರಾಗಿದ್ದಾರೆ.
ಗುರುವಾಯನಕೆರೆ ಎಸ್‌ಡಿಪಿಐ ಅಂಬುಲೆನ್ಸ್ ಚಾಲಕರಾಗಿರುವ ಸಮಾಜ ಸೇವಕ ಇಬ್ರಾಹಿಂ ಗುರುವಾಯನಕೆರೆ ಅವರ ಸಹೋದರಿ, ಚಿಕ್ಕಮಗಳೂರಿಗೆ ಮದುವೆ ಮಾಡಿಕೊಟ್ಟಿರುವ ನೆಬಿಸಾ ಮತ್ತು ಶಾನ್‌ಬಾಷಾ ದಂಪತಿ ಪುತ್ರರಾಗಿರುವ ಇಮ್ರಾನ್‌ಗೆ ಮೂರು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಜ್ವರ ಇತ್ತು. ಮಾವ ಇಬ್ರಾಹಿಂ ಅವರು ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ ಪಡೆದಿದ್ದರು. ಶನಿವಾರ ಮಧ್ಯ ರಾತ್ರಿ ಇದ್ದಕ್ಕಿದ್ದಂತೆ ಬಾಲಕನಿಗೆ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಔಷಧಿ ನೀಡಿ ಕುರ್ಚಿಯಲ್ಲಿ ಕುಳ್ಳಿರಿಸಲಾಗಿದ್ದಲ್ಲಿಂದ ಒಮ್ಮೆಲೇ ನೆಲಕ್ಕೆ ಕುಸಿದು ಬಿದ್ದರು. ತಕ್ಷಣ ಅವರನ್ನು ಗುರುವಾಯನಕೆರೆ ಖಾಸಗಿ ಅಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ವಿದ್ಯಾರ್ಥಿ ಮೃತರಾದ ಹಿನ್ನೆಲೆಯಲ್ಲಿ ಗುರುವಾಯನಕೆರೆ ಶಾಲೆಗೆ ಜು. 2 ರಂದು ರಜೆ ಸಾರಿ ಸಂತಾಪ ಸೂಚಿಸಲಾಯಿತು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಾಲಕನ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.