HomePage_Banner_
HomePage_Banner_

ವಯೋನಿವೃತ್ತಿಗೊಂಡ ಸಹಾಯಕ ಕೃಷಿ ಅಧಿಕಾರಿ ಹೆಚ್ ದಯಾನಂದ ರವರಿಗೆ ಬೀಳ್ಕೊಡುಗೆ.

ಬೆಳ್ತಂಗಡಿ: ಕೃಷಿ ಇಲಾಖೆ ಬೆಳ್ತಂಗಡಿಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸುಮಾರು 30 ವರ್ಷಗಳ ಸುಧೀರ್ಘ ಸೇವೆಯೊಂದಿಗೆ ವಯೋ ನಿವೃತ್ತರಾದ ಹೆಚ್. ದಯಾನಂದ ರವರಿಗೆ ಬೆಳ್ತಂಗಡಿ ಕೃಷಿ ಇಲಾಖೆ ಮತ್ತು ವೇಣೂರು ವಲಯದ ಸಿಬ್ಬಂದಿ ವರ್ಗದ ಪರವಾಗಿ ಬೀಳ್ಕೊಡುಗೆ ಸಮಾರಂಭ ಜೂ. 30 ರಂದು ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಪ್ರೇಮಾ ಕಾಂಬ್ಲಿ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ತಿಲಕ್ ಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸುತ್ತಾ ನಿವೃತ್ತ ದಯಾನಂದ ರವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇಣೂರಿನ ಉದ್ಯಮಿ ಭಾಸ್ಕರ ಪೈ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಸಹಾಯಕ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಅನುವುಗಾರ ಎಸ್. ಆರ್ ಭಾಸ್ಕರ ಸಾಲ್ಯಾನ್ ಮಾತನಾಡಿದರು.
ನಿವೃತ್ತ ಹೆಚ್ ದಯಾನಂದ ಮತ್ತು ಶ್ರೀಮತಿ ಗುಣವತಿ ದಂಪತಿಗಳನ್ನು ಶಾಲು ಹೊದಿಸಿ, ಹಾರ ಹಾಕಿ, ಚಿನ್ನದ ಉಂಗುರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.