ಬೆನಕ ಹೆಲ್ತ್ ಸೆಂಟರ್: ವೈದ್ಯರ ದಿನಾಚರಣೆ

ಉಜಿರೆ: ಇಲ್ಲಿಯ ಬೆನಕ ಹೆಲ್ತ್ ಸೆಂಟರ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಜು.1 ರಂದು ಬೆನಕ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಜಿರೆಯ ಹಿರಿಯ ವೈದ್ಯ ಡಾ| ಎಸ್.ಎಸ್ ಛಾತ್ರಾ ಹಾಗೂ ವಿಜಯಲಕ್ಷ್ಮೀ ದಂಪತಿಯನ್ನು ಗೌರವಿಸಲಾಯಿತು. ಬೆನಕ ಹೆಲ್ತ್ ಸೆಂಟರ್ ವೈದ್ಯಕೀಯ ನಿರ್ದೇಶಕ ಡಾ| ಗೋಪಾಲಕೃಷ್ಣ ಕೆ ಮಾತನಾಡಿ, ನಮ್ಮ ದೇಶದ ಹೆಮ್ಮೆಯ ಪುತ್ರ ಡಾ| ಬಿ.ಸಿ ರಾಯ್ ರವರ ಸ್ಮರಣಾರ್ಥ ಪ್ರತಿ ವರ್ಷ ಜು.1 ರಂದು ವೈದ್ಯರ ದಿನವನ್ನಾಗಿ ಆಚರಿಸುತ್ತಿದ್ದು, ಜನರ ಆರೋಗ್ಯಕ್ಕೆ ವಿಶೇಷ ಕೊಡುಗೆ ನೀಡುವ ವೈದ್ಯರನ್ನು ಗೌರವಿಸುವುದಕ್ಕೆ ಒಂದು ಅವಕಾಶವಾಗಿದೆ. ಈ ನಿಟ್ಟಿನಲ್ಲಿ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಪ್ರತಿವರ್ಷ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂದರು. ಆಸ್ಪತ್ರೆಯ ನರ್ಸಿಂಗ್ ಸೂಪರಿಂಡೆಂಟ್ ದೇವಸ್ಯ ವರ್ಗೀಸ್ ರವರು ವೈದ್ಯರ ದಿನದ ಕುರಿತು ಉಪನ್ಯಾಸ ನೀಡಿದರು.
ಡಾ| ಕೆ.ಎನ್ ಶೆಣೈ, ಡಾ| ಬಿ ಪ್ರಕಾಶ್, ಡಾ| ಆಶ್ವಿನ್ ಉದ್ಯಾವರ್, ಡಾ| ರವೀಂದ್ರ ಪ್ರಭು, ಡಾ| ಶಿವರಾಜ್ ಪಜಿಲ, ಡಾ| ಸ್ಮೃತಿ ಮರಾಠೆ, ಡಾ| ಸಂಗೀತಾ ಮೊದಲಾದವರು ಭಾಗವಹಿಸಿದ್ದರು.
ಡಾ| ಭಾರತಿ ಜಿ.ಕೆ ರವರು ವೈದ್ಯರುಗಳನ್ನು ಗೌರವಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.