ನಲಿಕೆ ಸಮಾಜ ಸೇವಾ ಸಂಘದಿಂದ ಸಚಿವ ಯು.ಟಿ ಖಾದರ್ ಭೇಟಿ.

Advt_NewsUnder_1
Advt_NewsUnder_1

ಬೆಳ್ತಂಗಡಿ: ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ, ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಅವರನ್ನು ಮಂಗಳೂರು ಪ್ರವಾಸಿ ಬಂಗಲೆ ಸರ್ಕ್ಯುಟ್ ಹೌಸ್‌ನಲ್ಲಿ ಜು. 1 ರಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ನಲಿಕೆ ಸಮಾಜದ ಏಳಿಗೆಗಾಗಿ ಕೆಲವೊಂದು ಬೇಡಿಕೆಗಳನ್ನೊಳಗೊಂಡ ಮನವಿಯನ್ನೂ ಮಾನ್ಯ ಸಚಿವರಿಗೆ ನೀಡಲಾಯಿತು.
ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್ ಪ್ರಭಾಕರ ನಲಿಕೆ ಅವರ ಮುಖ್ಯಸ್ಥಿಕೆಯಲ್ಲಿ ತೆರಳಿದ್ದ ನಿಯೋಗದಲ್ಲಿ ಉಪಾಧ್ಯಕ್ಷ ರಾಮು ಶಿಶಿಲ, ಪ್ರ. ಕಾರ್ಯದರ್ಶಿ ತಿಮ್ಮಪ್ಪ, ಪದಾಧಿಕಾರಿಗಳಾದ ವಿಜಯ ಕುಮಾರ್ ಮುಂಡಾಜೆ, ಓಬಯ್ಯ, ವಿನಯ ಕುಮಾರ್, ಸುರೇಶ್ ಇಳಂತಿಲ, ಶ್ಯಾಂ, ಗಿರಿಯಪ್ಪ, ಹರೀಶ್, ಸಂತೋಷ್ ನಾರಾವಿ, ರಂಜಿನಿ ರವಿ ಕುಮಾರ್ ಮುಂಡಾಜೆ, ಬೇಬಿ ವಿನಯ್, ಸಂಜೀವ, ವಿನಯ್ ಬೈಲಂಗಡಿ, ಜಗದೀಶ್, ಆನಂದ್ ವೇಣೂರು ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.