ಚಿನ್ನಾಭರಣ ನಗದು ಇದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ.

ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಅಟೋ ಇಟ್ಟುಕೊಂಡು ಅನೇಕ ವರ್ಷಗಳಿಂದ ಜನಸ್ನೇಹಿಯಾಗಿ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಾ ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಇಲ್ಲಿನ ಸುನ್ನತ್‌ಕೆರೆ ನಿವಾಸಿ ಹಮೀದ್ ಯಾನೆ ಪೊಡಿಮೋನು ಅವರು ತನಗೆ ರಸ್ತೆಯಲ್ಲಿ ಬಿದ್ದುಸಿಕ್ಕಿದ ಸುಮಾರು 2 ಲಕ್ಷ ರೂ. ಗಳಿಗೂ ಅಧಿಕ ಬೆಲೆಬಾಳುವ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಇದ್ದ ಬ್ಯಾಗನ್ನು ಕಳೆದುಕೊಂಡವರಿಗೆ ನಿಶ್ಯರ್ಥವಾಗಿ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಗುರುವಾಯನಕೆರೆಯಿಂದ ಗೇರುಕಟ್ಟೆ ಪರಪ್ಪು ಮಾರ್ಗವಾಗಿ ಜೂ. 30 ರಂದು ತನ್ನ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದ ಸಂದರ್ಭದಲ್ಲಿ, ಅವರ ಕಣ್ಣಿಗೆ ರಸ್ತೆ ಬದಿ ಬಿದ್ದಿದ್ದ ಚೀಲ ಗಮನಕ್ಕೆ ಬರುತ್ತದೆ. ತಕ್ಷಣ ಅದನ್ನು ಹೆಕ್ಕಿ ಅದರೊಳಗೆ ಸ್ವಿಚ್ಚ್ ಆಫ್ ಇದ್ದ ಮೊಬೈಲನ್ನು ಚಾರ್ಜ್ ಮಾಡಿ ಓನ್ ಮಾಡುವ ಮೂಲಕ ಹತ್ತಾರು ಕರೆಗಳನ್ನು ಮಾಡಿ ಕೊನೆಗೂ ಬ್ಯಾಗ್ ಕಳೆದುಕೊಂಡ ವ್ಯಕ್ತಿ ಪುತ್ತೂರು ತಾಲೂಕು ಬಲ್ನಾಡು, ಗ್ರಾಮದ ಪ್ರೇಮಾ ಅವರೆಂದು ಖಚಿತಪಡಿಸಿಕೊಂಡು ಅವರಿಗೆ ಅದನ್ನು ಹಸ್ತಾಂತರವಾಗುವಂತೆ ಮಾಡಿದ್ದಾರೆ. ಹಮೀದ್ ಪೊಡಿಮೋನು ಅವರ ಈ ಪ್ರಾಮಾಣಿಕತೆಗೆ ಎಲ್ಲೆಡೆಯಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.