ಇಂದಬೆಟ್ಟು ಗ್ರಾಮದ ಕಡಂಬಿಲದಲ್ಲಿ ಭಾರೀ ಮಣ್ಣು ಕುಸಿತ.

Advt_NewsUnder_1
Advt_NewsUnder_1
Advt_NewsUnder_1

ಇಂದಬೆಟ್ಟು ಗ್ರಾ. ಪಂ ವ್ಯಾಪ್ತಿಯ ಕಲ್ಲಾಜೆ ಶಾಲೆ ರಸ್ತೆ ಕಡಂಬಿಲ ಎಂಬಲ್ಲಿ ಭಾರೀ ಮಳೆಗೆ ರಸ್ತೆಯ ಕೆಳಗಿನ ಮಣ್ಣು ಕುಸಿದುಬಿದ್ದಿದೆ. ಸುಮಾರು 400 ರಷ್ಟು ಕುಟುಂಬ, ಕಲ್ಲಾಜೆ ಸರಕಾರಿ ಶಾಲೆ, ಅಂಗನವಾಡಿ ಇತ್ಯಾಧಿ ಪ್ರದೇಶಕ್ಕೆ ಸಂಪರ್ಕ ಸಾಧಿಸುವ ಪ್ರಮುಖ ರಸ್ತೆಯಾಗಿರುವ ಈ ರಸ್ತೆಯ ಕೆಳಗಿನಿಂದ ಮಣ್ಣು ಕುಸಿದಿದ್ದು ತೀರಾ ಅಪಾಯವನ್ನು ಆಹ್ವಾನಿಸುತ್ತಿದೆ.
ಸ್ಥಳಕ್ಕೆ ಜಿ.ಪಂ ಸಹಾಯಕ ಇಂಜಿನಿಯರ್ ಮುಹಮ್ಮದ್, ಇಂದಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ವೆಂಕಪ್ಪ ಕೋಟ್ಯಾನ್ ಸಹಿತ ಜನಪ್ರತಿನಿಧಿಗಳು ಗ್ರಾಮ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಅಪಾಯದಲ್ಲಿರುವುದರಿಂದ ಇದೇ ರಸ್ತೆ ಮೂಲಕ ಶಾಲೆಗೆ ಅಂಗನವಾಡಿಗೆ ಆಹಾರ ಸಾಮಾಗ್ರಿ, ಗ್ಯಾಸ್ ಇತ್ಯಾಧಿ ಸರಬರಾಜಾಗುತ್ತಿತ್ತು. ಅಲ್ಲದೆ ಅನೇಕ ಮಂದಿ ಇದೇ ರಸ್ತೆಯನ್ನು ಬಳಸುತ್ತಿದ್ದು ಇದೀಗ ಸಂಪರ್ಕ ಸಂಪೂರ್ಣ ಕಡಿದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.