HomePage_Banner_
HomePage_Banner_

ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳ ಸಭೆ.

ಬೆಳ್ತಂಗಡಿ: ದ.ಕ. ಹಾಲು ಒಕ್ಕೂಟದಲ್ಲಿ ದಿನಕ್ಕೆ ಸರಾಸರಿ 4.75 ಲಕ್ಷ ಲೀಟರ್ ಹಾಲು ಸಂಗ್ರಹ ವಾಗುತ್ತಿದ್ದು, ಸುಮಾರು 1 ಲಕ್ಷ ಲೀಟರ್ ಹಾಲಿನ ಹುಡಿಯನ್ನು ಮಾಡಲಾಗುತ್ತಿದೆ. ಇದು ಒಕ್ಕೂಟಕ್ಕೆ ಹೊರೆಯಾಗಿದ್ದು, ಹಾಲಿನ ಮಾರುಕಟ್ಟೆಗಾಗಿ ಉತ್ತರ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯು ಜೂ.26 ರಂದು ಶ್ರೀ ಧ.ಮಂ. ಕಲಾಭವನ ಪಿನಾಕಿ ಹಾಲ್‌ನಲ್ಲಿ ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ರವಿರಾಜ ಹೆಗ್ಡೆಯವರು ಕಳೆದ ಸಾಲಿನಲ್ಲಿ ಸರಾಸರಿ 4.33 ಲಕ್ಷ ಲೀಟರ್ ಹಾಲಿನ ಸಂಗ್ರಹಣೆ ಇದ್ದು, ಇದರಲ್ಲಿ ಸುಮಾರು 38 ರಿಂದ 40 ಲಕ್ಷ ಲೀಟರ್ ಹಾಲಿನ ಹುಡಿ ಮಾಡಿದ್ದೆವು. ಇದರಿಂದ ಒಕ್ಕೂಟಕ್ಕೆ ರೂ.3.80 ಕೋಟಿ ಹೆಚ್ಚುವರಿ ಹೊರೆಯಾಗಿದೆ. ಇದಕ್ಕಾಗಿ ದೆಹಲಿ, ಜಮ್ಮುಕಾಶ್ಮೀರ ಸೇರಿದಂತೆ ಉತ್ತರ ಭಾರತಕ್ಕೆ ಮಾರುಕಟ್ಟೆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
ಒಕ್ಕೂಟದಲ್ಲಿ ಒಟ್ಟು 1.30 ಲಕ್ಷ ಸದಸ್ಯರಿದ್ದು, ಇವರಲ್ಲಿ ಹಾಲು ಹಾಕುತ್ತಿರುವವರು 70 ಸಾವಿರ ಮಂದಿ ಮಾತ್ರ. ಪ್ರತಿ ಹಾಲು ಉತ್ಪಾದಕರ ಸಂಘದಲ್ಲಿ ನಿಷ್ಕ್ರಿಯ ಸದಸ್ಯರಿದ್ದಾರೆ ಅವರನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಬೇಕು. ಬೆಳ್ತಂಗಡಿ ತಾಲೂಕು ಕ್ಯಾನ್‌ಲೆಸ್ ತಾಲೂಕು ಆಗಬೇಕು, ಪ್ರತಿ ಸದಸ್ಯರು ದಿನಕ್ಕೆ ಅರ್ಧದಿಂದ ಒಂದು ಲೀಟರ್‌ನಷ್ಟು ಹಾಲನ್ನು ತಮ್ಮ ಮನೆಗೆ ಉಪಯೋಗಕ್ಕೆ ಇಟ್ಟುಕೊಂಡು ಉಳಿದ ಹಾಲನ್ನು ಸಂಘಕ್ಕೆ ಹಾಕುವಂತೆ ಕರೆ ನೀಡಿದರು. ಮುಂದಿನ ಯೋಜನೆಯಾಗಿ ಉಪ್ಪೂರಿನಲ್ಲಿ ಹೊಸ ಡೈರಿ, ಗ್ರಾಹಕರಿಗೆ ಪೆಗ್ ಬಾಟಲಿಯಲ್ಲಿ ಸುವಾಸಿತ ಹಾಲು ಪೂರೈಕೆ ಮಾಡುವುದಾಗಿ ಭರವಸೆಯಿತ್ತರು. ಸಭೆಯಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕುಂದು ಕೊರತೆಗಳ ಬಗ್ಗೆ ಸಂವಾದ ನಡೆಯಿತು. ಶಿಕ್ಷಣ ಕ್ಷೇತ್ರದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸ ಲಾಯಿತು. ಒಕ್ಕೂಟದಿಂದ ಶಿಬಾಜೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಮತ್ತು ನೌಕರರ ಕ್ಷೇಮಾಭಿವೃದ್ಧಿ ವೇದಿಕೆಯಿಂದ ನಿವೃತ್ತ ನೌಕರರಾದ ಹೆನ್ರಿ ಡಿಸೋಜಾ ಮತ್ತು ಬಾಲಕೃಷ್ಣ ಮಡಂತ್ಯಾರು ಇವರಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ನಿರ್ದೇಶಕರಾದ ನಾರಾಯಣ ಪ್ರಕಾಶ್, ವೀಣಾ ರೈ, ಪದ್ಮನಾಭ ಅರ್ಕಜೆ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಶಿವಶಂಕರ ಸ್ವಾಮಿ ಉಪಸ್ಥಿತರಿದ್ದರು. ನಿರ್ದೇಶಕ ನಿರಂಜನ ಭಾವಂತಬೆಟ್ಟು ಸ್ವಾಗತಿಸಿದರು. ಒಕ್ಕೂಟದ ಉಪವ್ಯವಸ್ಥಾಪಕ ಡಾ. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.