ಅಳದಂಗಡಿಯ ವಿಲ್ಮಾ ಲವೀನಾ ಡಿ’ಸೋಜಾ ರಿಗೆ ಯುವ ಸಾಹಿತ್ಯ ಪ್ರಶಸ್ತಿ.

Advt_NewsUnder_1
Advt_NewsUnder_1

ಅಳದಂಗಡಿ: ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಹಾಗೂ ಯುವ ಸಾಹಿತ್ಯ ಪುರಸ್ಕಾರಗಳನ್ನು ಜೂ.22 ರಂದು ಪ್ರಕಟಿಸಿದೆ. 21 ಜನರಿಗೆ ಬಾಲ ಸಾಹಿತ್ಯ ಹಾಗೂ 21 ಮಂದಿಗೆ ಯುವ ಸಾಹಿತ್ಯ ಪುರಸ್ಕಾರ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಯುವ ಕೊಂಕಣಿ ಲೇಖಕಿ ವಿಲ್ಮಾ ಬಂಟ್ವಾಳ್ ರವರ ‘ಮುಖ್ಡಿಂ’ ಕೊಂಕಣಿ ಕವನ ಸಂಕಲನ ಕೃತಿಗೆ ಯುವ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಮುಖ್ಡಿಂ ಕವನ ಸಂಕಲನದಲ್ಲಿ ೫೦ ರಷ್ಟು ಕೊಂಕಣಿ ಕವನಗಳಿವೆ. ಮುಖ್ಡಿಂ ಅಂದರೆ ಕನ್ನಡದಲ್ಲಿ “ಮುಖವಾಡ” ಎಂದರ್ಥ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ದುಷ್ಪರಿಣಾಮಗಳಿಂದ ಆಗಿರುವ ಅನಾಹುತವನ್ನು ವಿವರಿಸಲು ಮುಖವಾಡವನ್ನು ಒಂದು ರೂಪಕವಾಗಿ ಇಲ್ಲಿ ಬಳಸಲಾಗಿದೆ.
ವಿಲ್ಮಾ ಲವಿನಾ ಡಿಸೋಜ ರವರು ಬಂಟ್ವಾಳ ತಾಲೂಕಿನ ವಲೇರಿಯನ್ ಮತ್ತು ಲಿಲ್ಲಿ ಡಿಸೋಜ ದಂಪತಿ ಪುತ್ರಿ. ಮೊಡಂಕಾಪು ಚರ್ಚ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗಣಿತದಲ್ಲಿ ಎಂ.ಎಸ್ಸಿ ಓದಿದ್ದರು. ಇವರು ಅಳದಂಗಡಿ ನಿವಾಸಿಗಳಾದ ತೋಮಸ್ ಮೋನಿಸ್ ಮತ್ತು ಸೆಲೆಸ್ಟಿನ್ ಮೋನಿಸ್ ದಂಪತಿಯ ಪುತ್ರ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ವಿಜಯ್ ಮೋನಿಸ್ ರವರ ಧರ್ಮಪತ್ನಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.