ಬೆಳ್ತಂಗಡಿ ಸರಕಾರಿ ನೌಕರರ ಸಂಘದಿಂದ ಮೂರು ಮಂದಿ ಶಾಸಕರುಗಳಿಗೆ ಸನ್ಮಾನ.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಜೂ. 23 ರಂದು ಸಂಘದ ಸಭಾಂಗಣದಲ್ಲಿ ಈ ಭಾಗದಿಂದ ಆರಿಸಿ ಬಂದಿರುವ ಮೂರು ಮಂದಿ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿಯಿಂದ ಚುನಾಯಿತರಾದ ಹರೀಶ್ ಪೂಂಜ, ಕರ್ನಾಟಕ ವಿಧಾನ ಸಭೆಯಿಂದ ಮೇಲ್ಮನೆ ವಿಧಾನ ಪರಿಷತ್‌ಗೆ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾದ ಹರೀಶ್ ಕುಮಾರ್, ನೈರುತ್ಯ ಶಿಕ್ಷಕರ ಕ್ಷೇತ್ರದ ಮೂಲಕ ವಿಧಾನ ಪರಿಷತ್‌ಗೆ ಚುನಾಯಿತರಾದ ಎಸ್.ಎಲ್ ಭೋಜೇ ಗೌಡ ಚಿಕ್ಕಮಗಳೂರು ಇವರಿಗೆ ವೇದಿಕೆಯಲ್ಲಿ ಏಕಕಾಲದಲ್ಲಿ ಸನ್ಮಾನ ನಡೆಯಿತು.
ವಿಶೇಷ ಆಹ್ವಾನಿತರಾಗಿ ಸಹಾಯಕ ಆಯುಕ್ತರಾಗಿ ನೇಮಕಗೊಂಡು ಪ್ರಸ್ತುತ ಬೆಳ್ತಂಗಡಿ ಪ್ರೊಬೆಷನರಿ ತಹಶಿಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾಗಿರುವ ಮದನ್‌ಮೋಹನ್ ಅವರು ಉಪಸ್ಥಿತರಿದ್ದರು. ಈ ವೇಳೆ ಮೂರೂ ಮಂದಿ ಶಾಸಕರುಗಳಿಗೆ ಶಿಕ್ಷಕರ ಸಂಘ ಮತ್ತು ನೌಕರರ ಸಂಘದಿಂದ ಮನವಿಗಳನ್ನು ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಕೆಗೆ ಗಮನಸೆಳೆಯಲಾಯಿತು.
ಅನಾರೋಗ್ಯ ಪೀಡಿತರಾಗಿ ತೀವ್ರ ಸಮಸ್ಯೆಯಲ್ಲಿರುವ ವಿದ್ಯಾರ್ಥಿ ಭವಿತ್ ಅವರ ಚಿಕಿತ್ಸೆಗೆ ಸರಕಾರಿ ನೌಕರರ ಕಡೆಯಿಂದ 10 ಸಾವಿರ ರೂ. ಆರ್ಥಿಕ ಸಹಾಯವನ್ನು ಭವಿತ್ ತಾಯಿಗೆ ಸಮಾರಂಭದಲ್ಲೇ ನೀಡಲಾಯಿತು. ಇದೇ ವೇಳೆ ಅತಿಥಿ ಹರೀಶ್ ಕುಮಾರ್ ಅವರು ತಮ್ಮ ವೈಯುಕ್ತಿಕ ವತಿಯಿಂದ 5 ಸಾವಿರ ರೂ. ನೆರವು ನೀಡಿದರು.
ತ್ರೇಸಿಯಾ ಪ್ರಾರ್ಥನೆ ಹಾಡಿದರು. ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಲ. ಕೆ ಧರಣೇಂದ್ರ ಕುಮಾರ್ ಜೈನ್ ಸನ್ಮಾನಿತರನ್ನು ಪರಿಚಯಿಸಿದರು. ಆನಂದ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.