ಉಜಿರೆ: ಪುತ್ತೂರು ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಉಜಿರೆಯಿಂದ ಪ್ರಾರಂಭಗೊಂಡ ನೂತನ ಕಾಲೇಜು ಬಸ್ಸು ವ್ಯವಸ್ಥೆಯ ಉದ್ಘಾಟನೆಯು ಉಜಿರೆಯಲ್ಲಿ ನಡೆಯಿತು.
ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಬಸ್ಸು ವ್ಯವಸ್ಥೆಗೆ ಚಾಲನೆಯನ್ನು ನೀಡಿದರು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ವಿಜಯ ರಾಘವ ಪಡ್ವೆಟ್ನಾಯ, ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಮಣ್ಯ ಭಟ್.ಟಿ.ಎಸ್, ಕ್ಯಾಂಪಸ್ ನಿರ್ದೇಶಕ ಪ್ರೊ|ವಿವೇಕ್ ರಂಜನ್ ಭಂಡಾರಿ, ಊರ ಗಣ್ಯರು ಮತ್ತು ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಉಜಿರೆಯಿಂದ ಹೊರಡುವ ಬಸ್ಸು ಉಜಿರೆ-ಬೆಳ್ತಂಗಡಿ-ಗುರುವಾಯನಕೆರೆ-ಕಲ್ಲೇರಿ-ಉಪ್ಪಿನಂಗಡಿ ಮಾರ್ಗವಾಗಿ ಇಂಜಿನಿಯರಿಂಗ್ ಕಾಲೇಜಿಗೆ ಬರಲಿದೆ.