HomePage_Banner_
HomePage_Banner_

ಕೈಲಾರ್ ರಾಜಗೋಪಾಲ ಭಟ್ ರವರಿಗೆ ಗೌರವ ಡಾಕ್ಟರೇಟ್.

ಬೆಳ್ತಂಗಡಿ: ಇಪ್ಪತ್ತಾರು ಸಾವಿರಕ್ಕೂ ಹೆಚ್ಚು ಮಂದಿಗೆ ಧನಾತ್ಮಕ ಬದುಕಿನ ಪ್ರೇರಣೆ ನೀಡಿದ ಕಾರ್ಯವನ್ನು ಪುರಸ್ಕರಿಸಿ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ, ವಾಸ್ತು ಗಿಡ ತಜ್ಞ ಕೈಲಾರ್ ರಾಜಗೋಪಾಲ ಭಟ್ ರವರಿಗೆ ಜೂ.16 ರಂದು ಧಾರವಾಡದಲ್ಲಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಯಿತು.
ಧಾರವಾಡದ ಕರ್ನಾಟಕ ಕಾಲೇಜು ಕ್ಯಾಂಪಸ್ಸಿನ ಸೃಜನ್ ಕಲಾ ಮಂದಿರದಲ್ಲಿ ನಡೆದ ಇಂಡಿಯನ್ ವರ್ಚ್ಯುವಲ್ ಮೋಡ್ ಯುನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಶನ್ ಸಂಸ್ಥೆಯ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮದಲ್ಲಿ ಮೈಸೂರು ಸೂರ್ಯ ಸಿಂಹಾಸನದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಯವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಕೈಲಾರ್, ವಾಸ್ತುದೋಷ ನಿವಾರಣೆಗೆಂದು ವಾಸ್ತುಗಿಡವನ್ನು ನೀಡುತ್ತಿದ್ದ ತಾನು, ಬರಬರುತ್ತಾ ಜೀವನದಲ್ಲಿ ನೊಂದವರ, ಬಾಳಿನಲ್ಲಿ ವಿಶ್ವಾಸ ಕಳೆದುಕೊಂಡವರ ಬದುಕಿನಲ್ಲಿ ವಿಶ್ವಾಸ ಮೂಡಿಸುವ ದಿಸೆಯಲ್ಲಿ, ಕಳೆದ ೧೨ ವರ್ಷಗಳಿಂದ ಕೌನ್ಸಿಲಿಂಗ್ ಮಾಡುತ್ತಾ ಹಲವಾರು ಮಂದಿಯ ಬದುಕಿನ ದಿಕ್ಕನ್ನು ಸಾಧನೆಯ ಪಥದತ್ತ ಕೊಂಡೊಯ್ಯಲು ಸಾಧ್ಯವಾಗಿದೆ. ಈ ಸುದೀರ್ಘ ಅವಧಿಯ ಸೇವೆಗೆ ದೊರೆತ ಗೌರವ ಇದಾಗಿದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಚೇರ್ಮನ್ ರೆ| ಡಾ| ಡೇನಿಯಲ್ ಎಡ್ವಿನ್, ರಾಯಚೂರು ವಿ.ವಿ ಯ ವಿಶ್ರಾಂತ ಕುಲಪತಿ ಡಾ| ವಿ.ಎಂ. ಸಾಲಿಮಠ್, ವಿಶ್ವವಿಷ್ಣು ಸಹಸ್ರನಾಮ ಫೆಡರೇಶನ್ ಸ್ಥಾಪಕಾಧ್ಯಕ್ಷ ಡಾ| ಅರಳು ಮಲ್ಲಿಗೆ ಪಾರ್ಥಸಾರಥಿ, ಧಾರವಾಡ ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ| ರಾಜೇಶ್ವರಿ, ಪ್ರಮುಖರಾದ ಮಹೇಶ್ವರಯ್ಯ, ಶಿವಯೋಗಿ ಮಹಾಸ್ವಾಮಿ ತ್ರಿನೇತ್ರ ಮಹಾಂತ, ಪ್ರೊ| ಜಿ.ಎಸ್ ಕುಲಕರ್ಣಿ, ಡಾ| ಎ.ಪುಷ್ಪ ಅಯ್ಯಂಗಾರ್, ಯುನಿವರ್ಸಿಟಿಯ ಡೀನ್ ಡಾ| ಜಾನ್ ಲೆಸ್ಲಿ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.