ಕನ್ಯಾಡಿ ಸೇವಾ ಭಾರತಿ ವತಿಯಿಂದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಣೆ.

Advt_NewsUnder_1
Advt_NewsUnder_1

ಉಜಿರೆ: ಸಕ್ಷಮ ಬೆಳ್ತಂಗಡಿ ಹಾಗೂ ಸೇವಾಭಾರತಿ ಕನ್ಯಾಡಿ ವತಿಯಿಂದ ಸಕ್ಷಮ ದಿನಾಚರಣೆ ಪ್ರಯುಕ್ತ ಜೂ.23 ರಂದು ಉಜಿರೆಯ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ 2ನೇ ಹಂತದ ತಾಲೂಕಿನ 26 ಗ್ರಾಮಗಳ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 85 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಬೆಂಗಳೂರಿನ  ಟೆಕ್ಸಾಸ್ ಕಂಪನಿಯಿಂದ ಕೊಡಮಾಡಿದ ಸ್ಕೂಲ್ ಕಿಟ್   ವಿತರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳ ಗಿರೀಶ್ ಕುದ್ರೆಂತ್ತಾಯ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ Selco India ದ AGM ಗುರುಪ್ರಸಾದ್, ಸೇವಾಭಾರತಿಯ ಕಾರ್ಯದರ್ಶಿ ಕೆ ವಿನಾಯಕ ರಾವ್, BRC ಯ ಸಂಯೋಜಕರಾದ ಗಣೇಶ್ ಐತಾಳ್, ಶಿಕ್ಷಕಿ ಸೀತಾ ಆರ್ ಶೇಟ್ ಭಾಗವಹಿಸಿದ್ದರು. ಸಕ್ಷಮದ ಅಧ್ಯಕ್ಷ ರಾಜಪ್ರಸಾದ್ ಪೋಳ್ನಾಯ ಅಧ್ಯಕ್ಷತೆ ವಹಿಸಿ ಪ್ರಸ್ತಾಪಿಸಿದರು. ವಿನಿಷಾ ಪ್ರಾರ್ಥಿಸಿ, ಕೇಶವ ಸ್ವಾಗತಿಸಿ,  ನವೀನ ಕುಮಾರ್ ನಿರೂಪಿಸಿ, ಚಿತ್ರಾ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.