ಅಳದಂಗಡಿ: ನಿವೃತ್ತ ಪ್ರಾಂಶುಪಾಲ ರತ್ನಾಕರ್ ಶೆಟ್ಟಿ ಯವರಿಗೆ ವಿದಾಯ ಸಮಾರಂಭ.

ಅಳದಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ ಇಲ್ಲಿಯ ನಿವೃತ್ತ ಪ್ರಾಂಶುಪಾಲರಾದ ರತ್ನಾಕರ್ ಶೆಟ್ಟಿ ರವರಿಗೆ ವಿದಾಯ ಸಮಾರಂಭವು ಜೂ.23 ರಂದು ಅಳದಂಗಡಿ ಕಾಲೇಜು ಸಭಾಭವನದಲ್ಲಿ ಜರುಗಿತು.
ಶಾಸಕ ಹರೀಶ್ ಪೂಂಜ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ರವರು ಗೌರವ ಉಪಸ್ಥಿತರಿದ್ದು, ನಿವೃತ್ತ ಪ್ರಾಂಶುಪಾಲರಾದ ರತ್ನಾಕರ ಶೆಟ್ಟಿ ಯವರನ್ನು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಅಳದಂಗಡಿ ಕ್ಷೇತ್ರ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ ಸದಸ್ಯರಾದ ವಿನುಷಾ ಪ್ರಕಾಶ್, ಸುಧೀರ್ ಸುವರ್ಣ, ಗ್ರಾ.ಪಂ ಅಧ್ಯಕ್ ಸತೀಶ್ ಕುಮಾರ್ ಮಿತ್ತಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗಂಗಾಧರ ಮಿತ್ತಮಾರು, ಅಳದಂಗಡಿ ಗ್ರಾ.ಪಂ ಸದಸ್ಯರಾದಸದಾನಂದ ಪೂಜಾರಿ, ನಳಿನಿ, ಲಲಿತಾ, ಕಾಲೇಜು ಸ್ಥಾಪಕ ಸದಸ್ಯ ಸೋಮನಾಥ ಮಯ್ಯ, ಅಳದಂಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ರೈ, ಶಿರ್ಲಾಲು ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ, ಅಳದಂಗಡಿ ಸ.ಪ್ರೌ.ಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧರ ಸುವರ್ಣ, ಹಳೆ ವಿದ್ಯಾರ್ಥಿ ಶೀಥಲ್ ಜೈನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.