ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ಹೆಸರಿನ ಸಂಸ್ಥೆಯು ಪರವಾನಿಗೆ ಇಲ್ಲದೆ ಶಿಕ್ಷಣ ಸಂಸ್ಥೆ ನಡೆಸಿ ಸುಳ್ಳು ಅಂಕಪಟ್ಟಿ ಮತ್ತು ಸರ್ಟೀಫೀಕೇಟುಗಳನ್ನು ನೀಡಿ ಮೋಸ ಮತ್ತು ವಂಚನ ಮಾಡುತ್ತಾ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವುದನ್ನು ತಕ್ಷಣ ತಡೆಯುವಂತೆ ಕೋರಿ ಬೆಳ್ತಂಗಡಿ ಆರಕ್ಷಕ ವೃತ್ತ ನಿರೀಕ್ಷಕರಿಗೆ ಮತ್ತು ಬೆಳ್ತಂಗಡಿ ಶಾಸಕರಿಗೆ ಎ.ಬಿ.ವಿ.ಪಿ. ವತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಸಂಚಾಲಕ ತೀಕ್ಷಿತ್ ಕೆ. ದಿಡುಪೆ, ಪುತ್ತೂರು ಜಿಲ್ಲಾ ಸಂಚಾಲಕ ಪ್ರಜ್ವಲ್, ಪುತ್ತೂರು ಜಿಲ್ಲಾ ಸಹ ಸಂಚಾಲಕ ಸಂದೇಶ್ ಮತ್ತು ಎಬಿವಿಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.