ಸೇವಾ ಭಾರತಿ ವತಿಯಿಂದ ವಿಕಲಚೇತನ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣೆ.

Advt_NewsUnder_1
Advt_NewsUnder_1

ಅಳದಂಗಡಿ: ಕಳೆದ ಹದಿನೈದು ವರ್ಷಗಳಿಂದ ಸೇವಾಭಾರತಿ ಸಂಸ್ಥೆ ಸದ್ದಿಲ್ಲದೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ತಾಲೂಕಿನ ಮಾದರಿ ಸೇವಾ ಸಂಸ್ಥೆಯಾಗಿದೆ ಎಂದು ಅಳದಂಗಡಿಯ ಡಾ| ಸುಷ್ಮಾ ಡೋಂಗ್ರೆ ಹೇಳಿದರು. ಅವರು ಜೂ.16 ರಂದು ಸೇವಾ ಭಾರತಿಯ ಸಕ್ಷಮ ವಿಭಾಗದ ವತಿಯಿಂದ ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಒಂದರಿಂದ ಹತ್ತನೇ ತರಗತಿಯ ವಿಕಲಚೇತನ ಮಕ್ಕಳಿಗೆ ಉಚಿತವಾಗಿ ಸ್ಕೂಲು ಕಿಟ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿಗಳಾದ ಬಿ ಆರ್ ಡಬ್ಲ್ಯು ಜಾನ್ ಡಿಸೋಜ, ಟೆಕ್ಸಾಸ್ ಕಂಪನಿಯ ಐಟಿ ಮಾನೇಜರ್ ರಾಧಾಕೃಷ್ಣ , ಸಮಾಜ ಸೇವಕ ಸದಾನಂದ ಉಂಗಿಲ ಬೈಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸೇವಾ ಭಾರತಿಯ ಜೊತೆ ಕಾರ್ಯದರ್ಶಿ ಮುರಳಿಧರ ದಾಸ್ ಉಪಸ್ಥಿತರಿದ್ದರು. ಶಶಿಧರ ಅಳದಂಗಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕು.ಶ್ರೇಯಾ ಪ್ರಾರ್ಥಸಿದರು. ಸೇವಾ ಭಾರತಿ ಟ್ರಸ್ಟಿ ಮಹೇಶ್ ಕನ್ಯಾಡಿ ಸ್ವಾಗತಿಸಿ, ಸೇವಾ ಭಾರತಿ ಕಾರ್ಯಾಲಯ ಪ್ರಮುಖರಾದ ಪರಮೇಶ್ವರ ಕಾರ್ಯಕ್ರಮದ ಪ್ರಸ್ತಾವನೆ ಮಾಡಿದರು. ಸಿ.ಆರ್.ಪಿ ಸೇವಂತಿ ಧನ್ಯವಾದವಿತ್ತರು. ಬಿಐಇಆರ್ ಟಿ.ಸೀತಾ.ಆರ್ ಶೇಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

ಇಪ್ಪತ್ತು ಮಂದಿ ವಿಕಲಚೇತನ ಮಕ್ಕಳಿಗೆ ಸ್ಕೂಲು ಕಿಟ್ ವಿತರಿಸಲಾಯಿತು. ವಿದ್ಯಾರ್ಥಿಗಳ ಪೋಷಕರು ಹಾಗೂ ಸೇವಾ ಭಾರತಿಯ ಗ್ರಾಮ ಸಂಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.