HomePage_Banner_
HomePage_Banner_
HomePage_Banner_

ದೇವಾಂಗ ಸಮಾಜ ಉಜಿರೆ ವಲಯ ಕಾರ್ಯಕ್ರಮ .

ಉಜಿರೆ: ಸಾಕ್ಷತ್ ಪರಮಶಿವನ ಅನುಗ್ರಹದಿಂದ ಜನ್ಮತಾಳಿದ ದೇವಾಂಗ ಮಹರ್ಷಿಯು ದೇವಾಂಗ ಸಮಾಜದ ಕುಲಗುರುಗಳಾಗಿದ್ದಾರೆ. ಇಡೀ ವಿಶ್ವಕ್ಕೆ ವಸ್ತ್ರವಿನ್ಯಾಸವನ್ನು ಕಲಿಸಿದ ಈ ಸಮಾಜದ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಅಧ್ಯಕ್ಷರು ಪರಮಪೂಜ್ಯ ದೇವಾಂಗ ಜಗದ್ಗುರು ಹೇಮಕೂಟ ಹಂಪಿಯ ಶ್ರೀ ದಯಾನಂದ ಪುರಿ ಮಹಾಸ್ವಾಮಿ ಹೇಳಿದರು.
ದೇವಾಂಗ ಸಮಾಜ ಉಜಿರೆ ವಲಯ ಇದರ ವತಿಯಿಂದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಭವನದಲ್ಲಿ ಜೂ.20 ರಂದು ನಡೆದ ಸಮಾಜ ಬಾಂಧವರ ಸಭೆಯಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ನಮ್ಮದು ಐತಿಹಾಸಿಕ ಪರಂಪರೆಯುಳ್ಳ ಸಮಾಜವಾಗಿದೆ. ದೇವರದಾಸಿಮಯ್ಯ 7 ನೇ ಅವತಾರವಾಗಿದೆ. ಕನ್ನಡದಲ್ಲಿ ವಚನ ಸಾಹಿತ್ಯವನ್ನು ಬರೆದ ಮಹಾನ್ ಸಂತ ಅವರು. ನಮ್ಮ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದರೂ, ನಮ್ಮ ಪರಂಪರೆ, ಸಂಸ್ಕೃತಿ ದೊಡ್ಡದು, ಶ್ರೀ ಕೃಷ್ಣದೇವರಾಯರಿಂದ ಬಳವಳಿಯಾಗಿ ಬಂದ ನಮ್ಮ ಮಠದ ಪರಂಪರೆ ಉನ್ನತವಾದುದು, ಮಠದ ಸಂಪರ್ಕ, ಗುರುಗಳ ಸಂಪರ್ಕವನ್ನು ಇಟ್ಟುಕೊಂಡಾಗ ಸಮಾಜ ಬೆಳೆಯುತ್ತದೆ. ಸಮಾಜವನ್ನು ಉತ್ತುಂಗ ಸ್ಥಿತಿಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತದಾರ ವಿಜಯರಾಘವ ಪಡ್ವೆಟ್ನಾಯ ಮಾತನಾಡಿ ಪ್ರತಿಯೊಂದು ಸಮಾಜದ ಸಂಸ್ಕೃತಿಯ ಪ್ರತೀಕ ಗುರುಗಳು. ನಾವು ಗುರುಗಳಿಗೆ ವಂದಿಸಿದ ಬಳಿಕ ನಮ್ಮ ಆರಾಧ್ಯದೇವರನ್ನು ಪೂಜಿಸಬೇಕು ಇದರಿಂದ ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು. ದೇವಾಂಗ ಸಮಾಜ ಆರ್ಥಿಕವಾಗಿ ಸದೃಡವಲ್ಲದಿದ್ದರೂ, ಸಾಂಸ್ಕೃತಿಕವಾಗಿ ಉನ್ನತ ಸ್ಥಾನದಲ್ಲಿದೆ ಎಂದು ಹೇಳಿ ಸುಮಾರು ೭೦ ವರ್ಷಗಳ ಹಿಂದೆ ದೇವಾಂಗ ಸ್ವಾಮೀಜಿ ಪಡುವೆಟ್ಟು ಮನೆಗೆ ಬಂದ ನೆನಪನ್ನು ಅವರು ಈ ಸಂದರ್ಭ ಮಾಡಿದರು. ಸಮಾಜ ಬಂಧುಗಳ ಪರವಾಗಿ ಹಿರಿಯರಾದ ಬಿ.ಎಸ್. ಗಿರಿಯಪ್ಪ, ರಾಜ್ಯಾಧ್ಯಕ್ಷ ರಮೇಶ್ ಜಿ. ಮಾತನಾಡಿ ಮಾರ್ಗ ದರ್ಶನ ನೀಡಿದರು. ಈ ಸಂದರ್ಭ ಸ್ವಾಮೀಜಿಯವರನ್ನು ಸಮಾಜದ ಬಂಧುಗಳ ಪರವಾಗಿ ಗೌರವಿಸಲಾಯಿತು. ಪಡ್ವೆಟ್ನಾಯರನ್ನು ಸಮಾಜದ ಪರವಾಗಿ ಸ್ವಾಮೀಜಿಯವರು ಅಭಿನಂದಿಸಿದರು. ಉಜಿರೆ ವಲಯದ ಅಧ್ಯಕ್ಷ ಎಂ.ಡಿ. ಭಾಸ್ಕರ್ ಸ್ವಾಗತಿಸಿದರು. ಕಾರ್ಯದರ್ಶಿ ಪರವೇಶ್ವರ ಪ್ರಸ್ತಾವಿಕ ವಾಗಿ ಮಾತನಾಡಿ ಸಂಘ ನಡೆದು ಬಂದ ಹಿನ್ನಲೆಯನ್ನು ವಿವರಿಸಿದರು. ಸಿರಿ ಯೋಜನಾಧಿಕಾರಿ ರೋಹಿತ್ ಕಾರ್ಯಕ್ರಮ ನಿರೂಪಿಸಿ, ಎಸ್.ಕೆ. ಡಿ.ಆರ್.ಪಿ. ಮೈಸೂರು ಯೋಜನಾಧಿಕಾರಿ ಕೇಶವ ದೇವಾಂಗ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.