ಬೆಳ್ತಂಗಡಿ: ರಾಜ್ಯ ಅಂಗನವಾಡಿ ಕಾರ್ಯಕರ್ತೆ ಯರ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್ ನೇತೃತ್ವದ ನಿಯೋಗವು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ರವರನ್ನು ಭೇಟಿಯಾಗಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿತು.
ಅಂಗನವಾಡಿ ಕಾರ್ಯಕರ್ತೆಯರು 10 ವರ್ಷಗಳಿಂದ ಸೇವಾಭದ್ರತೆ ಇಲ್ಲದೆ ಸರಕಾರಿ ಸೇವೆಗಳನ್ನು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಸೇವೆಯನ್ನು ಖಾಯಂಗೊಳಿಸಬೇಕು. ಮಾತೃಪೂರ್ಣ ಯೋಜನೆ ಪ್ರಕಾರ ಅಂಗನವಾಡಿ ಕೇಂದ್ರಕ್ಕೆ ಬಂದು ಬಾಣಂತಿಯರು ಹಾಗೂ ಗರ್ಭಿಣಿಯರು ಆಹಾರ ಪಡೆದು ಕೊಳ್ಳಬೇಕು. ಆದರೆ ಕೇಂದ್ರಕ್ಕೆ ಬಾರದ ಭಾಣಂತಿಯರಿಗೆ, ಗರ್ಭಿಣಿಯರಿಗೆ ಮುಂಗಡ ಆಹಾರ ವಿತರಿಸಬೇಕು. ಕಾರ್ಯಕರ್ತೆಯರಿಗೆ ನಿಗದಿತ ಸಮಯದಲ್ಲಿ ಗೌರವಧನ ಪಾವತಿ ಮಾಡಬೇಕು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಸಚಿವೆ ಜಯಮಾಲಾ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬೆಳ್ತಂಗಡಿ ತಾಲೂಕಿನಿಂದ ಶಶಿಕಲಾ ಕೋಯನಗರ ಇಂದಬೆಟ್ಟು, ಭಾರತಿ ಹೊಸ್ತೋಟ, ಕಮಲಾ ಕೊಕ್ಕಡ ಮೊದಲಾದವರು ಉಪಸ್ಥಿತರಿದ್ದರು.