ತಾಲೂಕಿನ 22 ರಸ್ತೆಗಳು ಮೇಲ್ದರ್ಜೆಗೆ: ಶಾಸಕರಿಂದ ಸಚಿವರಿಗೆ ಮನವಿ.

ಬೆಳ್ತಂಗಡಿ: ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ರವರು ಜೂ.19 ರಂದು ಮಳೆಯಿಂದ ಹಾನಿಗೊಳಗಾದ ಚಾರ್ಮಾಡಿ ಘಾಟಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಹರೀಶ್‌ಪೂಂಜ ರವರು ತಾಲೂಕಿನ ಆಯ್ದ ಸುಮಾರು 22 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದರು.
ತಾಲೂಕು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು, ಅನೇಕ ಗ್ರಾಮಗಳು ಸರ್ವಋತು ರಸ್ತೆಯಿಂದ ವಂಚಿತವಾಗಿವೆ. ಬೆಳ್ತಂಗಡಿ ಲೋಕೋಪಯೋಗಿ ವಿಭಾಗ ಕೇವಲ 100ಕಿ.ಮೀ.ನಷ್ಟು ಜಿಲ್ಲಾ ಮುಖ್ಯ ರಸ್ತೆಯನ್ನು ಹೊಂದಿದೆ. ತಾಲೂಕು ವ್ಯಾಪ್ತಿಯ ಸುಮಾರು22 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ದಿಪಡಿಸಿದಲ್ಲಿ ಗ್ರಾಮೀಣ ಜನರು ತಾಲೂಕು ಕೇಂದ್ರವನ್ನು ಸಂಪರ್ಕಿಸಲು ಸಹಾಯವಾಗಲಿದೆ ಎಂದು ಪೂಂಜಾರವರು ಕೋರಿದ್ದಾರೆ.
ಮಾರುಕಟ್ಟೆಗೆ ಶಾಲೆ- ಕಾಲೇಜುಗಳಿಗೆ ವೈದ್ಯಕೀಯ ಅಗತ್ಯಗಳಿಗಾಗಿ ಜನರು ತಾಲೂಕು ಕೇಂದ್ರಕ್ಕೆ ಬರಲು ಪರದಾಡಬೇಕಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಕಡೆಗಳಲ್ಲಿ ನೆರೆಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಿಥಿಲ, ಕೆಸರಿನಿಂದ ಜಾರುವ ರಸ್ತೆಗಳಿಂದ ಆತಂಕದಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ತಾಲೂಕಿನ ಗ್ರಾಮೀಣ ರಸ್ತೆ ಅಭಿವೃದ್ಧಿ ಅವಶ್ಯಕತೆ ಇದೆ ಎಂದು ಸಚಿವರಿಗೆ ಮನವರಿಕೆ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.