ಮಚ್ಚಿನ: ಇಲ್ಲಿಯ ಕುದ್ರಡ್ಕ ಶಾಲಾ ಬಳಿ ರಸ್ತೆ ಅಗಲಗೊಳಿಸುವ ಸಂದರ್ಭ ರಸ್ತೆ ಬದಿಯಲ್ಲಿದ್ದ ದೂಪದ ಮರವೊಂದು ಬೀಳುವ ಹಂತದಲ್ಲಿದ್ದು ಸಮೀಪದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್, ಪಂಪ್ಶೆಡ್, ಶಾಲಾ ಆವರಣಗೋಡೆ ಅಲ್ಲದೆ ಅನೇಕ ವಿದ್ಯುತ್ ಕಂಬಗಳಿಗೆ ಹಾನಿಯಾಗಲಿದೆ. ಅಲ್ಲದೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ಹಾಗೂ ಶಾಲಾ ಮಕ್ಕಳಿಗೂ ಅಪಾಯವಾಗುವ ಸಂಭವವಿದ್ದು ಆದಷ್ಟು ಬೇಗ ಈ ಮರವನ್ನು ಸಂಬಧಪಟ್ಟ ಇಲಾಖೆಯವರು ತೆರವುಗೊಳಿಸಬೇಕಾಗಿ ನಾಗರಿಕರು ಒತ್ತಾಯಿಸಿದ್ದಾರೆ.