ಸಚಿವ ಹೆಚ್.ಡಿ ರೇವಣ್ಣ ಚಾರ್ಮಾಡಿ ಘಾಟಿಗೆ ಭೇಟಿ.

Advt_NewsUnder_1
Advt_NewsUnder_1

ಬೆಳ್ತಂಗಡಿ:  ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ರವರು ಇಂದು (ಜೂ.19) ಚಾರ್ಮಾಡಿ ಘಾಟಿ ಗೆ ಬೇಟಿ , ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ತುರ್ತು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸಿದರು.

ಸಚಿವರ ಜೊತೆ ವಿಧಾನ ಪರಿಷತ್ ನೂತನ ಸದಸ್ಯ ಎಸ್.ಎಲ್ ಧರ್ಮೇ ಗೌಡ, ತಹಶಿಲ್ದಾರ್ ಟಿ.ಸಿ ಹಾದಿಮನಿ, ಜನತಾ ದಳ ಜಾತ್ಯತೀತ ಪಕ್ಷದ ತಾ. ಅಧ್ಯಕ್ಷ ಪ್ರವೀಣ್ಚಂದ್ರ ಜೈನ್, ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ, ಯುವ ಜನತಾ ದಳ ಅಧ್ಯಕ್ಷ ಸೂರಜ್ ಕುಮಾರ್ ವಳಂಬ್ರ, ಶಾಹಿದ್ ಪಾದೆ, ಶ್ರೀನಿವಾಸ ಗೌಡ ಪಟ್ರಮೆ, ಕಿಶೋರ್ ಅರಸಿನಮಕ್ಕಿ, ರತ್ನಾಕರ್ ಆಚಾರ್ಯ, ಸುಂದರ ಗೌಡ, ಮೂಡಿಗೆರೆ ಶ್ರೀನಿವಾಸ ಗೌಡ ವಳಂಬ್ರ, ಶಾಸಕ ಹರೀಶ್ ಪೂಂಜ ಜೊತೆಗೆ ಪೂವಾಜೆ ಕುಶಾಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಸಮಾಜ ಸೇವಕ, ಆಪದ್ಭಾಂಧವ ಚಾರ್ಮಾಡಿ ಹಸನಬ್ಬ ಅವರೂ ಇದ್ದು ಸಚಿವರಿಗೆ ಘಾಟ್ ರಸ್ತೆ ಬಗ್ಗೆ ಮಾಹಿತಿ ನೀಡಿದರು.
ಇಲಾಖೆಯ ಅಧಿಕಾರಿಗಳಾದ ಬೆಳ್ತಂಗಡಿ ಪಿಡಬ್ಲ್ಯುಡಿ ಪ್ರಭಾರ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಜಿಲ್ಲಾ ಕಾರ್ಯಪಾಲಕ ಅಭಿಯಂತರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು. ತಹಶಿಲ್ದಾರರ ಜೊತೆ ಬೆಳ್ತಂಗಡ ಕಂದಾಯ ನಿರೀಕ್ಷಕ ರವಿ ಕುಮಾರ್, ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪ್ರತೀಶ್, ಗ್ರಾಮ ಕರಣಿಕರುಗಳು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.