ಜೇಸಿ ವಲಯ 15 ರ ಮಧ್ಯಂತರ ಸಮ್ಮೇಳನ ಕಾರ್ಯಕ್ರಮ.

ಬೆಳ್ತಂಗಡಿ: ಪ್ರತಿಷ್ಠಿತ ಮಂಜುಶ್ರೀ ಜೇಸಿ ಇದರ ವತಿಯಿಂದ ಜೇಸಿ ವಲಯದ15 ರ ಮಧ್ಯಂತರ ಸಮ್ಮೇಳನ ‘ಪರಿವರ್ತನ್-2018’  ಜೂ. 17 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಿತು.

ಸಮ್ಮೇಳನವನ್ನು ವಲಯಾಧ್ಯಕ್ಷ ರಾಕೇಶ್ ಕುಂಜೂರು ಉದ್ಘಾಟಿಸಿದರು.  ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ನಿರ್ದೇಶಕ ಹಾಗೂ ನಟ ಸುಚೇಂದ್ರ ಪ್ರಸಾದ್ , ಜೆಸಿಐ ಇಂಡಿಯಾ ಪೌಂಡೇಶನ್‌ನ ನಿರ್ದೇಶಕ ವೈ.ಸುಕುಮಾರ್ ಹಾಗೂ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ್ ನಾಯಕ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಲಯಾಧಿಕಾರಿ ವಸಂತ ಶೆಟ್ಟಿ ನೇತೃತ್ವದಲ್ಲಿ ಹೊರತಂದ ‘ಉದಯಪತ್ರಿಕೆ’ಯನ್ನು ಬಿಡುಗಡೆಗೊಳಿಸಲಾಯಿತು. ಸಾಧನೆಗೈದ ಅನೇಕ ಘಟಕಗಳನ್ನು ಗೌರವಿಸಲಾಯಿತು. ಶಾಸಕರಾಗಿ ಆಯ್ಕೆಯಾದ ಹರೀಶ್ ಪೂಂಜ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೆ.ಹರೀಶ್ ಕುಮಾರ್ ರವರನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.

ವಲಯ  ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲ್, ವಲಯದ ನಿಕಟ ಪೂರ್ವಾಧ್ಯಕ್ಷ ಸಂತೋಷ್ .ಜಿ, ಘಟಕಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕೇಶವ ಪೈ, ರಘುನಾಥ ನಾಯಕ್  ಹೇಮಾವತಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.