HomePage_Banner_
HomePage_Banner_
HomePage_Banner_

‘ಭಾಗ್ಯಲಕ್ಷ್ಮೀ ಸ್ಟೇಷನರಿ ಮತ್ತು ಗಿಫ್ಟ್ ಮಳಿಗೆ’ ಶುಭಾರಂಭ

ಬೆಳ್ತಂಗಡಿ: ಇಲ್ಲಿಯ ರಾಮನಗರದಲ್ಲಿ ಶ್ರೀ ಲಕ್ಷ್ಮೀನಾರಾಯಣ ಕಾಂಪ್ಲೆಕ್ಸ್ ನಲ್ಲಿ ಭಾಗ್ಯಲಕ್ಷ್ಮೀ ಸ್ಟೇಷನರಿ ಮತ್ತು ಗಿಫ್ಟ್ ಸೆಂಟರ್ ನ ಉದ್ಘಾಟನೆಯನ್ನು ಜೂ.18 ರಂದು ಬೆಳ್ತಂಗಡಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬೆಳ್ತಂಗಡಿ ಚರ್ಚ್ ಧರ್ಮಗುರುಗಳಾದ ವಂ. ಫಾ| ಬೊನವೆಂಚರ್ ನಜ್ರೆತ್ ರವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನಿವೃತ್ತ ಎಸ್.ಪಿ ಪೀತಾಂಬರ ಹೆರಾಜೆ, ತಾ.ಪಂ ಸದಸ್ಯೆ ಶ್ರೀಮತಿ ಕೇಶವತಿ, ಶೇಖರ ಬಂಗೇರ, ಉದ್ಯಮಿ ಪುಷ್ಪರಾಜ್ ಶೆಟ್ಟಿ, ಪಳನಿ ಸ್ವಾಮಿ, ಲ್ಯಾನ್ಸಿ .ಎ. ಪಿರೇರಾ ಭಾಗವಹಿಸಿದ್ದರು.
ಬಂದಂತಹ ಅತಿಥಿಗಳನ್ನು ಶ್ರೀಮತಿ ಮಮತಾ ವಿ.ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಸ್ವಾಗತಿಸಿ ಸತ್ಕರಿಸಿದರು. ನ್ಯಾಶನಲ್ ಇನ್ಶೂರೆನ್ಸ್‌ನ ಅಭಿವೃದ್ಧಿ ಅಧಿಕಾರಿ ಆರ್ವಿನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.