HomePage_Banner_
HomePage_Banner_

ಕೊಕ್ಕಡ: ಗ್ರಾ.ಪಂ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮುನ್ನೂರು ಗ್ರಾ.ಪಂ ಪಿಡಿಒ.

ಕೊಕ್ಕಡ:  ಪಂಚಾಯತ್ ಪಿ.ಡಿ.ಒ ಓರ್ವರು ಗ್ರಾಪಂ ಕಚೇರಿಯ ಶೌಚಾಲಯದಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಇಂದು( ಜೂ.13) ನಡೆದಿದೆ.
ಮುನ್ನೂರು ಗ್ರಾ. ಪಂ ಪಿಡಿಒ ಕೃಷ್ಣಸ್ವಾಮಿ(47.ವ) ಮೃತಪಟ್ಟವರು. ಮಾಜಿ ಯೋಧರಾಗಿರುವ ಇವರು ಕೊಕ್ಕಡದ ಬಡೆಕ್ಕರ ನಿವಾಸಿ ನಿವೃತ್ತ ಶಿಕ್ಷಕ ಶಿವರಾಮ ತೋಡ್ತಿಲ್ಲಾಯ ಮತ್ತು ತೇಜಾವತಿ ದಂಪತಿಯ ಪುತ್ರರಾಗಿದ್ದು, ಪತ್ನಿ ಶಿಕ್ಷಕಿಯಾಗಿದ್ದಾರೆ.

ಕೃಷ್ಣಸ್ವಾಮಿ ಯವರು ಮಂಗಳೂರಿನ ಕುಳಾಯಿಯಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು.  ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.