HomePage_Banner_
HomePage_Banner_
HomePage_Banner_

ವಿ. ಪ.ಚುನಾವಣೆ: ಪದವಿಧರ ಕ್ಷೇತ್ರ ಅಯಾನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರ ಭೋಜೇ ಗೌಡ ಗೆಲುವು.

Advt_NewsUnder_1
    ಎಸ್ ಎನ್. ಭೋಜೆ ಗೌಡ                         ಅಯನೂರು ಮಂಜುನಾಥ್

ಬೆಳ್ತಂಗಡಿ: ರಾಜ್ಯ ವಿಧಾನ ಪರಿಷತ್ ನೈರುತ್ಯ ಪದವಿಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಪದವಿಧರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾದ ಅಯಾನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಎಸ್.ಎನ್ ಭೋಜೇ ಗೌಡ ಚುನಾಯಿತರಾಗಿದ್ದಾರೆ.
ನೈರುತ್ಯ ಪದವಿಧರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾದ ಅಯಾನೂರು ಮಂಜುನಾಥ್ ಚುನಾಯಿತರಾಗಿದ್ದಾರೆ. ಮಂಜುನಾಥ್ ಅವರು 15186 ಮತಗಳನ್ನು ಪಡೆದುಕೊಂಡು ಈ ಸಾಧನೆಯನ್ನು ಮಾಡಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಸ್.ಪಿ ದಿನೇಶ್  9354 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಆಭ್ಯರ್ಥಿ ಭೋಜೇ ಗೌಡ ಚುನಾಯಿತರಾಗಿದ್ದಾರೆ. ಭೋಜೇ ಗೌಡರ ಅವರು ೨೮೩೫ ಮತಗಳ ಅಂತರದಿಂದ ಈ ಗೆಲುವನ್ನು ಸಾಧಿಸಿದರು. ಭೋಜೇ ಗೌಡರಿಗೆ 8647 ಮತಗಳು ದೊರಕಿದರೆ, ಇವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ, ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕ್ಯಾ| ಗಣೇಶ್ ಕಾರ್ಣಿಕ್ ಅವರು5812 ಮತಗಳನ್ನು ಪಡೆದು ಸೋಲುಂಡರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ್ 2578 ಮತಗಳಷ್ಟೇ ಪಡೆಯಲು ಶಕ್ತರಾದರು.
ಪದವಿಧರ ಶೇ 62-ಶಿಕ್ಷಕ ಶೇ 76 ಮತದಾನ: ಪದವಿಧರ ಕ್ಷೇತ್ರದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 1281 ಮತದಾರರಲ್ಲಿ 806 ಮಂದಿ ಮತ ಚಲಾಯಿಸಿದ್ದು, ಶೇ 62.92  ಮತದಾನವಾಗಿತ್ತು. ಶಿಕ್ಷಕರ ಕ್ಷೇತ್ರದಲ್ಲಿ 953  ಮತದಾರರಲ್ಲಿ 731 ಮಂದಿ ಮತ ಚಲಾಯಿಸಿದ್ದು, ಶೇ 76.71 ಮತದಾನವಾಗಿತ್ತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.