ಜೂ.17: ಜೇಸಿ ವಲಯ ಮಧ್ಯಂತರ ಸಮ್ಮೇಳನ.

ಬೆಳ್ತಂಗಡಿ: ಪ್ರತಿಷ್ಠಿತ ಮಂಜುಶ್ರೀ ಜೇಸಿ ಇದರ ವತಿಯಿಂದ ಜೇಸಿ ವಲಯದ ಮಧ್ಯಂತರ ಸಮ್ಮೇಳನ ‘ಪರಿವರ್ತನ್-2018’  ಜೂ. 17 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿದೆ ಎಂದು ಜೇಸಿ ಅಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ ಹೇಳಿದರು.
ಅವು ಜೂ.12 ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಮ್ಮೇಳನವನ್ನು ವಲಯಾಧ್ಯಕ್ಷ ರಾಕೇಶ್ ಕುಂಜೂರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಭಾಗವಹಿಸಲಿದ್ದಾರೆ. ನಿರ್ದೇಶಕ ಹಾಗೂ ನಟ ಸುಚೇಂದ್ರ ಪ್ರಸಾದ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜೆಸಿಐ ಇಂಡಿಯಾ ಪೌಂಡೇಶನ್‌ನ ನಿರ್ದೇಶಕ ವೈ.ಸುಕುಮಾರ್ ಹಾಗೂ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ್ ನಾಯಕ್ ಉಪಸ್ಥಿತರಿರುವರು ಎಂದು ಹೇಳಿದರು.
ವಲಯದ 82 ಘಟಕಗಳಿಂದ ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ವಲಯದ 15 ತಂಡಗಳಿಂದ ಸಾಂಸ್ಕೃತಿಕ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಕಟಪೂರ್ವಾಧ್ಯಕ್ಷ ಸಂತೋಷ್ ಕೋಟ್ಯಾನ್ ಪೂರ್ವಾಧ್ಯಕ್ಷ ತುಕಾರಾಮ್, ವಲಯಾಧ್ಯಕ್ಷರಾದ ವಸಂತ ಶೆಟ್ಟಿ ಮತ್ತು ಚಿದಾನಂದ ಇಡ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.