ಉಜಿರೆ:’ಮಲ್‌ಜಅ’ ಅಭಯ ಕೇಂದ್ರಕ್ಕೆ ವಸತಿ- ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಭೇಟಿ.

ಉಜಿರೆ: ಕರ್ನಾಟಕ ಸರಕಾರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್  ರವರು ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿಯ “ಮಲ್‌ಜಅ” ದಅವಾ ಮತ್ತು ರಿಲೀಫ್ ಸೆಂಟರ್ ಸಮುದಾಯದ ಅಭಯ ಕೇಂದ್ರಕ್ಕೆ  ಜೂ.10 ರಂದು ಭೇಟಿ ನೀಡಿದರು. ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳ್ತಂಗಡಿಗೆ ಆಗಮಿಸಿದ ಅವರು ಸಂಸ್ಥೆಯ ಚೇರ್‌ಮೆನ್ ಸಯ್ಯಿದ್ ಉಜಿರೆ ತಂಙಳ್ ಅವರ ಆಶೀರ್ವಾದ ಪಡೆದರು.

ಜೂ. 11 ರಂದು  ನಡೆಯುವ ಮಲ್‌ಜಅ ಮೂರನೇ ವರ್ಷದ ಬೃಹತ್ ಪ್ರಾರ್ಥನಾ ಸಮ್ಮೇಳನದ ಪೂರ್ವ ತಯಾರಿಗಳ ಬಗ್ಗೆ ತಂಙಳ್‌ರಿಂದ ವಿವರಣೆ ಪಡೆದ ಸಚಿವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಚಿವರ ನಿಯೋಗದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ನೂತನ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಡಂತ್ಯಾರು ಗ್ರಾ.ಪಂ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಇರಾ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ರಝಾಕ್, ಕಾಂಗ್ರೆಸ್ ಮುಖಂಡ ಶಿವಪ್ರಸಾದ್ ಶೆಟ್ಟಿ, ಮಲ್‌ಜಅ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶರೀಫ್ ಬೆರ್ಕಳ , ಕಾಜೂರು ದರ್ಗಾ ಶರೀಫ್ ಆಡಳಿತಾಧಿಕಾರಿ ಮುಹಮ್ಮದ್ ರಫಿ, ಮಲ್‌ಜಅ ಮುದರ್ರಿಸ್ ಆಸಿಫ್ ಅಹ್‌ಸನಿ, ಹಮೀದ್ ಮುಸ್ಲಿಯಾರ್, ರಝಾಕ್, ಮೂಸಾಕ, ಮುಬೀನ್, ಕಮಾಲ್, ಸದಕ, ಸುಲೈಮಾನ್ ಕುಂಟಿನಿ, ಇಕ್ಬಾಲ್ ಮಾಚಾರ್, ಬದ್ರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.