ಬಾರ್ಯ: ಕಾಣೆಯಾಗಿದ್ದ ರಮೇಶ್ ರವರ ಮೃತ ದೇಹ ಪತ್ತೆ.

Advt_NewsUnder_1
Advt_NewsUnder_1

ಬಾರ್ಯ:  ಜೂ.2 ರಿಂದ ಕಾಣೆಯಾಗಿದ್ದ ಬಾರ್ಯ ಗ್ರಾಮದ ಅಜಿರ ಮನೆ ನಿವಾಸಿ ರಮೇಶ್ (45.ವ)  ರವರ ಮೃತ ದೇಹವು ತುಂಬೆ ಡ್ಯಾಮ್ ಬಳಿ‌ ಪತ್ತೆಯಾಗಿದ್ದು,  ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗರದಲ್ಲಿಡಲಾಗಿದೆ.

ಟೈಲರ್ ವೃತ್ತಿ ನಿರ್ವಹಿಸುತ್ತಿದ್ದ ರಮೇಶ್ ರವರು ಜೂ.1 ರಂದು ಮುಂಜಾನೆ 4.00 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಬಾಗಿಲು ತೆರೆದು ಯಾರೋ ಹೊರಗಡೆ ಮಾತನಾಡುತ್ತಿದ್ದಾರೆ, ಹೋಗಿ ನೋಡಿ ಬರುವುದಾಗಿ ತಿಳಿಸಿ ಮನೆಯಿಂದ ಹೊರ ಹೋದವರು ಹಿಂತಿರುಗಿಬಾರದೇ ಇದ್ದುದನ್ನು ಕಂಡು, ಸಂಬಂಧಿಕರ ಮನೆಯಲ್ಲಿ, ಊರಿನಲ್ಲಡೆ ವಿಚಾರಿಸಲಾಗಿದ್ದು, ಇವರು ಕಾಣೆಯಾಗಿರುವ ಬಗ್ಗೆ ರಮೇಶ್ ರವರ ಪತ್ನಿ ಉಷಾರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ  ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.