ಕೊಕ್ಕಡ ಈಶ್ವರ ಭಟ್ ರವರಿಗೆ ಕಲಾ ಸಂಗಮ ಪ್ರಶಸ್ತಿ.

ಬೆಳ್ತಂಗಡಿ: ಕಲಾಸಂಗಮ ಸಾಂಸ್ಕೃತಿಕ ವೇದಿಕೆ ಮಂಗಳೂರು ವಾರ್ಷಿಕೋತ್ಸವ ಅಂಗವಾಗಿ ನಗರದ ಪುರಭವನದಲ್ಲಿ ಜೂ.10 ರಂದು ಸಂಜೆ ನಡೆಯುವ ಯಕ್ಷ ಸಿರಿ-2018 ಕಾರ್ಯಕ್ರಮದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಕೊಕ್ಕಡ ಈಶ್ವರ ಭಟ್ ರವರಿಗೆ ಕಲಾ ಸಂಗಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆ ಅಧ್ಯಕ್ಷ ಕೇಶವ ಹೆಗಡೆ ತಿಳಿಸಿದ್ದಾರೆ.
ಯಕ್ಷಗಾನ ಕ್ಷೇತ್ರಕ್ಕ 45 ವರ್ಷಗಳಿಗೂ ಮಿಕ್ಕಿ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದ ಕೊಕ್ಕಡ ಈಶ್ವರ್ ಭಟ್ ರವರು 1942 ರಲ್ಲಿ ಕಡಂಗೋಡ್ಲು ನಲ್ಲಿ ಜನಿಸಿದರು. ಕುಡಾಣ ಗೋಪಾಲಕೃಷ್ಣ ಭಟ್ಟರಲ್ಲಿ ಪ್ರಾಥಮಿಕ ನಾಟ್ಯಾಭ್ಯಾಸ ಕಲಿತು ಯಕ್ಷರಂಗದಲ್ಲಿ ಹಂತ ಹಂತವಾಗಿ ಬೆಳೆದು, ತೆಂಕು ಬಡಗುತಿಟ್ಟುಗಳ ಪರಿಪಕ್ವತೆ, ನಿರಂತರ ಅಧ್ಯಯನದಿಂದ ಅಪ್ರತಿಮ ಸ್ತ್ರೀ ವೇಷಧಾರಿಯಾಗಿ, ನಾಟ್ಯ ಮಯೂರಿಯಾಗಿ ಪ್ರಸಿದ್ಧಿ ಪಡೆದವರು.
ಮೂಲ್ಕಿ ಮೇಳ, ಕೊಡ್ಲು ಮೇಳ, ಕದ್ರಿ ಮೇಳ, ಸುರತ್ಕಲ್ ಮೇಳ, ಕುಂಬಳೆ ಮೇಳ, ಬೆಳ್ಮಣ್ಣು ಮೇಳ, ಶಿರಸಿ ಮೇಳ,ಇಡಗುಂಜಿ ಮೇಳ ದಲ್ಲಿ ಸುಧೀರ್ಘ ತಿರುಗಾಟ ಅನುಭವ ಹೊಂದಿದ್ದಾರೆ ಅವರು ನಿರ್ವಹಿಸಿದ ಮಾಯಾ ಶೂರ್ಪನಖ, ಗುಣಸುಂದರಿ ದಮಯಂತಿ, ದಾಕ್ಷಾಯಿಣಿ, ಶಾರದೆ, ಚಂದ್ರಮತಿ ಪಾತ್ರಗಳು ಜನಪ್ರಿಯವಾಗಿದೆ. ರಂಗದಿಂದ ನಿವೃತ್ತಿ ಪಡೆದ ಬಳಿಕ ಕೊಕ್ಕಡ ಸಮೀಪದ ಪಟ್ರಮೆಯಲ್ಲಿ ಕೃಷಿಕರಾಗಿ ಜೀವನ ನಡೆಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.