ವಿ.ಪರಿಷತ್ ಚುನಾವಣೆ: ಪದವೀಧರ ಕ್ಷೇತ್ರ ಶೇ- 62.8, ಶಿಕ್ಷಕರ ಕ್ಷೇತ್ರ ಶೇ-76.7 ಮತದಾನ.

ಬೆಳ್ತಂಗಡಿ :  ಜೂ.8 ದಂದು ನಡೆದ  ವಿಧಾನ ಪರಿಷತ್ ಚುನಾವಣೆಯಲ್ಲಿ ಪಧವೀಧರ ಕ್ಷೇತ್ರದಲ್ಲಿ ಶೇ. 62.8 ಮತ ಚಲಾವಣೆಯಾಗಿದ್ದು, ಶಿಕ್ಷಕರ ಕ್ಷೇತ್ರದಲ್ಲಿ ಶೇ.76.7 ಮತಚಲಾವಣೆಯಾಗಿದೆ.

ಬೆಳ್ತಂಗಡಿ ಹಳೆಯ ತಾಲೂಕು ಕಚೇರಿಯ ಬೂತ್ ನಂಬ್ರ 17 ರಲ್ಲಿ  ಪದವೀಧರ ಕ್ಷೇತ್ರದಲ್ಲಿ ಗಂಡು 343 , ಹೆಣ್ಣು 298 ಒಟ್ಟು 641 ಮತದಾರರಿದ್ದು, ಅದರಲ್ಲಿ 453 ಮತದಾರರು ಮತ ಚಲಾಯಿಸಿದ್ದಾರೆ. ಬೆಳ್ತಂಗಡಿ ಕಂದಾಯ ನಿರೀಕ್ಷಕರ ಕಚೇರಿಯ ಬೂತ್ ನಂಬ್ರ 17 (A) ರಲ್ಲಿ  ಪದವೀಧರ ಕ್ಷೇತ್ರದಲ್ಲಿ  ಗಂಡು 351, ಹೆಣ್ಣು 289 ಒಟ್ಟು 640 ಮತದಾರರಿದ್ದು, ಅದರಲ್ಲಿ ಒಟ್ಟು 352 ಮತದಾರರು ಮತ ಚಲಾಯಿಸಿದ್ದಾರೆ.

ಪದವೀಧರ ಕ್ಷೇತ್ರದ ಎರಡೂ ಮತಗಟ್ಟೆಗಳು ಸೇರಿ ಒಟ್ಟು  1281 ಮತದಾರರಿದ್ದು, 805 ಮತದಾರರರು ಮತ ಚಲಾಯಿಸಿ ಶೇ.62.8 ಮತದಾನವಾಗಿದೆ.

ಮಿನಿವಿಧಾನ ಸೌಧ ದಲ್ಲಿ ಬೂತ್ ನಂಬ್ರ 17 ಮತಗಟ್ಟೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಹೆಣ್ಣು 449, ಗಂಡು-504 ಒಟ್ಟು 953 ಮತದಾರರಿದ್ದು, ಅದರಲ್ಲಿ 731 ಮತದಾರರು ಮತ ಚಲಾಯಿಸಿ ಶೇ. 76.7 ಮತದಾನವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.