ಇಂಡಿಯಾ ಟುಡೇ ರ್‍ಯಾಂಕಿಂಗ್‌ನಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿಗೆ ಉತ್ಕೃಷ್ಟ ಮಾನ್ಯತೆ.

ಉಜಿರೆ: ದೇಶದ ಪ್ರತಿಷ್ಠಿತ  ಹಾಗೂ ಜನಪ್ರಿಯ ಆಂಗ್ಲ ವಾರಪತ್ರಿಕೆ ‘ಇಂಡಿಯಾ ಟುಡೆ’ ಇತ್ತೀಚೆಗೆ ನಡೆಸಿದ ದೇಶವ್ಯಾಪಿ ಅತ್ಯುತ್ತಮ ಕಾಲೇಜುಗಳ ಆಯ್ಕೆ ಸಮೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿವಿಧ ಭಾಗಗಳು ಅತ್ಯುತ್ತಮ ರ್‍ಯಾಂಕಿಂಗ್ ಪಡೆದಿವೆ. ಗುಣಾತ್ಮಕ ಶಿಕ್ಷಣದ ಮೂಲಕ ಗುರುತಿಸಿಕೊಂಡಿರುವ ಉಜಿರೆ ಎಸ್.ಡಿ.ಎಂ ಕಾಲೇಜಿಗೆ ಈ ಮೂಲಕ ಮತ್ತೊಮ್ಮೆ ದೇಶವ್ಯಾಪಿ ವಿಶೇಷ ಮನ್ನಣೆ ದೊರೆತಂತಾಗಿದೆ.

 ಜೂ.4. 2018ರ ಇಂಡಿಯಾ ಟುಡೇ  ವಿಶೇಷ ಸಂಚಿಕೆಯಲ್ಲಿ ನೀಡಲಾದ ರ್‍ಯಾಂಕಿಂಗ್ ವಿವರಗಳಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಬಿ.ಸಿ.ಎ ವಿಭಾಗ ದೇಶದ ಅತ್ಯುತ್ತಮ 50 ಕಾಲೇಜುಗಳ ಪೈಕಿ 19 ನೇ ಸ್ಥಾನ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ (ಎಂ.ಸಿ.ಜೆ) ದೇಶದ ಅತ್ಯುತ್ತಮ 25 ಕಾಲೇಜುಗಳ ಪಟ್ಟಿಯಲ್ಲಿ 21 ನೇ ಸ್ಥಾನ, ಎಂ.ಎಸ್.ಡಬ್ಲ್ಯು ವಿಭಾಗ ದೇಶದ ಅತ್ಯುತ್ತಮ 25 ಕಾಲೇಜುಗಳ ಪೈಕಿ 25 ನೇ ಸ್ಥಾನ, ಬಿ.ಬಿ.ಎಂ ವಿಭಾಗ ದೇಶದ ಅತ್ಯುತ್ತಮ 50 ಕಾಲೇಜುಗಳ ಪೈಕಿ 26 ನೇ ಸ್ಥಾನ ಗಳಿಸುವ ಮೂಲಕ ರಾಷ್ಟ್ರದ ಪ್ರತಿಷ್ಠಿತ ಕಾಲೇಜಾಗಿ ಗುರುತಿಸಿಕೊಂಡಿದೆ. ಇದರ ಜೊತೆಗೆ ದೇಶದ ಅತ್ಯುನ್ನತ 100 ಕಾಲೇಜುಗಳ ಪೈಕಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಕಲಾ ವಿಭಾಗಕ್ಕೆ 66, ವಿಜ್ಞಾನ ವಿಭಾಗಕ್ಕೆ 57 ಹಾಗೂ ವಾಣಿಜ್ಯ ವಿಭಾಗಕ್ಕೆ 95 ನೇ ಸ್ಥಾನ ಲಭಿಸಿರುವುದು ಗಮನಾರ್ಹವಾಗಿದೆ.
ಇಂಡಿಯಾ ಟುಡೇ ಪತ್ರಿಕೆಯು ಕಾಲೇಜಿನ ಪ್ರವೇಶಾತಿ ಸಾಮರ್ಥ್ಯ, ಶೈಕ್ಷಣಿಕ ಗುಣಮಟ್ಟ, ಮೂಲಸೌಲಭ್ಯ, ಉತ್ತಮ ಕಲಿಕಾ ವಾತಾವರಣ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ರೂಪಿಸುವುದಕ್ಕೆ ನೀಡುವ ಒತ್ತು, ಕರಿಯರ್ ಪ್ಲೇಸ್‌ಮೆಂಟ್ ಮತ್ತು ಪ್ರೋಗ್ರೆಷನ್, ಶೈಕ್ಷಣಿಕ ಸಾಧನೆ ಹಾಗೂ ಚಟುವಟಿಕೆಗಳೆಲ್ಲದರ ಕುರಿತು ಮಾಹಿತಿ ಸಂಗ್ರಹಿಸಿ, ಪರಿಶೀಲಿಸಿ ಅಂತಿಮವಾಗಿ ಫಲಿತಾಂಶ ಪ್ರಕಟಿಸಿದೆ. ಇಂಡಿಯಾ ಟುಡೆ ಪತ್ರಿಕೆಯು ಮಾರ್ಕೇಂಟಿಂಗ್ ಅನದ ಡೆವಲೆಪ್‌ಮೆಂಟ್ ರೀಸರ್ಚ್ ಅಸೋಸಿಯೇಟ್ಸ್ ಸಂಸ್ಥೆಯ ಜೊತೆಗೂಡಿ ಈ ಸಮೀಕ್ಷೆ ನಡೆಸಿತ್ತು.
ಪತ್ರಿಕೆ ನೀಡಿರುವ ವಿವರಣೆ ಪ್ರಕಾರ ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ ನೀಡುವ ಕಾಲೇಜುಗಳ ಪೈಕಿ ಉಜಿರೆಯ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ (ಎಂ.ಸಿ.ಜೆ) ದೇಶದಲ್ಲೇ 2 ನೇ ಸ್ಥಾನ ಪಡೆದಿದ್ದು, ಬಿ.ಸಿ.ಎ ವಿಭಾಗ 5 ನೇ ಸ್ಥಾನ ಪಡೆದಿದೆ. ಈ ಮೂಲಕ ಕಡಿಮೆ ಖರ್ಚಿನಲ್ಲಿ ಅತ್ಯುನ್ನತ ಶಿಕ್ಷಣ ನಿಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಉಜಿರೆ ಎಸ್.ಡಿ.ಎಂ ಕಾಲೇಜು ಪಾತ್ರವಾಗಿದೆ.
ಸಂಸ್ಥೆಯ ಅಧ್ಯಕ್ಷರಾದ ಡಾ|ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ|ಬಿ. ಯಶೋವರ್ಮ ಸಂಸ್ಥೆಯ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿ ಇದಕ್ಕೆ ಪೂಕರವಾಗಿ ಸಹಕರಿಸಿದ ಸಂಸ್ಥೆಯ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.