HomePage_Banner_
HomePage_Banner_
HomePage_Banner_

ಉಜಿರೆ: ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ ಶಿಪ್ ಕಾರ್ಯಕ್ರಮ.

Advt_NewsUnder_1

ಬೆಳ್ತಂಗಡಿ : ಶ್ರೀ ಗುರುಮಿತ್ರ ಸಮೂಹದ ‘ಶ್ರೀ ಗುರು ದಶಪರ್ವಂ’ ಅಂಗವಾಗಿ ಇತ್ತೀಚೆಗೆ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ ಶಿಪ್ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮವನ್ನು ಉಜಿರೆ ಗ್ರಾಮ ಪಂಚಾಯತ್ ಮೂಲಕ ಆರಂಭಿಸಿ ಪಂಚಾಯತ್ ಹೊರಾಂಗಣ ಗೋಡೆಯ ಮೇಲೆ ಯಕ್ಷಗಾನ, ಸ್ವಚ್ಛತೆ, ಮನರಂಜನೆ ಸಂಬಂಧಿತ ಸುಮಾರು ಎಂಟು ಚಿತ್ರಗಳು ಅದ್ಭುತವಾಗಿ ಮೂಡಿಬಂದಿದ್ದು ನೋಡುಗರನ್ನು ಆಕರ್ಷಿತರನ್ನಾಗಿಸುವ ಜೊತೆಗೆ ಸ್ವಚ್ಛ ಭಾರತ್ ಕಲ್ಪನೆಗೆ ಹೊಸ ಆಯಾಮ ಸೃಷ್ಟಿಸಿವೆ. ತಂಡದ ಪ್ರಮುಖ ಮೈಲಿಗಲ್ಲು ಎಂಬಂತೆ ಪ್ರಾರಂಭವಾದ ಈ ಕಾರ್ಯಾಗಾರ ಪೂರ್ಣಗೊಂಡಿದ್ದು, ಗೋಡೆಯ ಸಾಲಿನುದ್ದಕ್ಕೂ ಇರುವ ಚಿತ್ರಗಳು ನೋಡುಗರನ್ನು ಪಂಚಾಯತ್ ಕಡೆ ಕಣ್ಣಾಡಿಸುವಂತೆ ಮಾಡುತ್ತಿವೆ.

ಕಿಶನ್, ವಿಶಾಖ್, ವಿಘ್ನೇಶ್, ಸ್ವಸ್ತಿಕ್ ಇವರ ಕೈಚಳಕದಲ್ಲಿ ಮೂಡಿಬಂದಿರುವ ಚಿತ್ರಗಳಿಗೆ ತಂಡದ ಯುವ ಅಧ್ಯಕ್ಷ ಸ್ಮಿತೇಶ್. ಎಸ್. ಬಾರ್ಯ, ಸುಪ್ರೀತ್, ಸುಧಿತ್, ಹೇಮಂತ್, ಸುಜಿತ್, ಅಕ್ಷಯ್, ಸಂಪತ್, ಆತ್ಮೀಯ ಶೆಟ್ಟಿ ಹಾಗೂ ಚೈತ್ರಾ ಸಾಥ್ ನೀಡಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.