ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಪ್ರಭಾಕರ ಬಂಗೇರ

Advt_NewsUnder_1
Advt_NewsUnder_1

ಬೆಳ್ತಂಗಡಿ: ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಕ್ಷೇತ್ರದಲ್ಲಿ 953 ಮತಗಳು ಹಗೂ ಪದವೀಧರರ ಕ್ಷೇತ್ರದಲ್ಲಿ 1281 ಮತಗಳಿದ್ದು, ಈ ಬಾರಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಆಯನೂರು ಮಂಜುನಾಥ್ ಅವರಿಗೆ ಗೆಲುವಾಗುವುದು ಖಚಿತ ಎಂದು ಮಾಜಿ ಶಾಸಕ ಪ್ರಭಾಕರ ಬಂಗೇರ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗ ಈ ಎರಡೂ ಕ್ಷೇತ್ರಗಳ ಹಲವಾರು ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದ್ದನ್ನು ಮತದಾರರು ಮರೆಯದೆ ಈ ಬಾರಿ ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಬೇಕು, ಮುಂದೆಯೂ ನಮ್ಮ ಸಮರ್ಥ ಅಭ್ಯರ್ಥಿಗಳು ನಿಮ್ಮ ಜೊತೆ ಇರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಮತದಾನದ ಸಮಯವನ್ನು ಆಯೋಗ ಮರು ನಿಗಧಿಗೊಳಿಸಿದ್ದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ವಿಸ್ತರಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಮತಚಲಾಯಿಸಿ ಎಂದು ಕೇಳಿಕೊಂಡರು.
ಗೋಷ್ಠಿಯಲ್ಲಿ ಕೊರಗಪ್ಪ ನಾಯ್ಕ, ವಿಜಯ ಗೌಡ, ಎಂ. ಶಶಿಧರ ಕಲ್ಮಂಜ, ಮಂಜುನಾಥ ಸಾಲಿಯಾನ್, ವಿಜಯ ಗೌಡ ಅತ್ತಾಜೆ ಉಪಸ್ಥಿತರಿದ್ದರು.

ಮತದಾರರ ಪಟ್ಟಿ ನೊಂದಾವಣೆ ಗೊಂದಲ ನಿವಾರಿಸಬೇಕು
ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಪ್ರತೀ ಚುನಾವಣೆ ಸಂದರ್ಭ ಪದವೀಧರರು ಮತ್ತು ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಿಕೊಳ್ಳಬೇಕಾಗಿದೆ. ಅಲ್ಲದೆ ನೊಂದಾವಣೆ ಪ್ರಕ್ರೀಯೆಗೆ ಸಾಕಷ್ಟು ತೊಡಕುಗಳು, ನಿಯಮಾವಳಿಗಳು ಇವೆ. ಅವುಗಳನ್ನು ಸಡಿಲೀಕರಿಸಿ ಕಾಲೇಜಿನಿಂದಲೇ ನೇರ ನೊಂದಾವಣೆಗೆ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ತಿಳಿಸಿದರು.

ಸರಕಾರ ವಿಸರ್ಜಿಸಿ ಮತ್ತೆ ಚುನಾವಣೆಗೆ ಬನ್ನಿ
ರಾಜ್ಯದಲ್ಲಿ ಮತದಾರರ ತೀರ್ಪಿನ ವಿರುದ್ಧವಾಗಿ ಅಪವಿತ್ರ ಮೈತ್ರಿ ಮೂಲಕ ಸರಕಾರ ರಚಿಸಿಕೊಂಡಿರುವವರಿಗೆ ಇನ್ನೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಿಟ್ಟರೆ ಬೇರೆ ಮಂಡಲ ರಚಿಸಿಕೊಳ್ಳಲಾಗಿಲ್ಲ. ಅಧಿಕಾರಕ್ಕಾಗಿ ಗುದ್ದಾಡುವುದನ್ನು ಬಿಟ್ಟು ಅಭಿವೃದ್ದಿಗೆ ಗಮನಕೊಡಿ. ಆಗದಿದ್ದರೆ ಶೀಘ್ರದಲ್ಲೇ ಸರಕಾರ ವಿಸರ್ಜಿಸಿ ಮತ್ತೆ ಚುನಾವಣೆಗೆ ಬನ್ನಿ ಎಂದು ಮಾಜಿ ಶಾಸಕ ಪ್ರಭಾಕರ ಬಂಗೇರ ಒತ್ತಾಯಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.