ಪಡ್ಡಂದಡ್ಕದಲ್ಲಿ ಮುಸ್ಲಿಂ ತಂಡಗಳು ಪರಸ್ಪರ ಹೊಡೆದಾಟ.

Advt_NewsUnder_1
Advt_NewsUnder_1

ಪಡ್ಡಂದಡ್ಕ: ಮುಸ್ಲಿಂ ಸಮುದಾಯದ ಎರಡು ತಂಡಗಳು ಪಠ್ಯ ಪುಸ್ತಕದ ಬಾಷೆಗೆ ಸಂಬಂಧಪಟ್ಟಂತೆ ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿದ ಘಟನೆ ಪಡ್ಡಂದಡ್ಕದಲ್ಲಿ ಜೂ.5 ರಂದು ರಾತ್ರಿ ನಡೆದಿದೆ.
ಪಡ್ಡಂದಡ್ಕದ ಮದರಸದಲ್ಲಿನ ಮಲೆಯಾಳಂ ಬಾಷೆಯಲ್ಲಿನ ಪಠ್ಯಪುಸ್ತಕವನ್ನು ಮಕ್ಕಳಿಗೆ ಬೊಧಿಸಲಾಗುತ್ತಿತು. ಆದರೆ ಮಲೆಯಾಳಿ ಬಾಷೆ ಕಲಿಸುವುದು ಕಷ್ಟಕರವಾದುದರಿಂದ ಕನ್ನಡ ಬಾಷೆಯಲ್ಲಿ ಕಲಿಸುವುದೆಂದು ಮದರಸದವರು ತೀರ್ಮಾನಿಸಿದ್ದರು.
ಆದರೆ ಈ ತೀರ್ಮಾನದಿಂದ ಕೆಲವು ಮುಸ್ಲಿಂ ನಾಗರಿಕರು ಅಸಮಧಾನಗೊಂಡಿದ್ದು, ಮಲಯಾಳ ಮತ್ತು ಕನ್ನಡ ಪರವಾಗಿ ಪರಸ್ಪರರ ವಿರುದ್ಧ ವಾಗ್ವಾದ ನಡೆದು ರಾಡ್, ತಲವಾರಿನಿಂದ ಹೊಡೆದಾಟ ನಡೆದಿದೆ.
ಘಟನೆಯಲ್ಲಿ ಶಬೀರ್, ಮುಝಾಮಿಲ್, ಆರಿಫ್ ಹಲ್ಲೆಗೊಳಗಾಗಿದ್ದು, ಆರೀಫ್ ನೀಡಿದ ದೂರಿನಂತೆ ಯು.ಕೆ ಮಹಮ್ಮದ್, ಬಶೀರ್ ಗಾಂಧಿನಗರ, ಶರೀಫ್ ಗಾಂಧಿನಗರ, ಅಶ್ರಫ್ ಗಾಂಧಿನಗರ, ರಹಿಂ ಪೆರಾಡಿ ಹಾಗೂ ಶಬೀರ್ ವಿರುದ್ಧ ಕೇಸು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರತಿ ದೂರು ದಾಖಲಾಗಿದ್ದು, ರಿಝ್ವಾನ್, ಮಹಮ್ಮದ್ ಶರೀಫ್, ಮಹಮ್ಮದ್ ಇರ್ಫಾನ್ ಮಜೀದ್ ಹಲ್ಲೆಗೊಳಗಾಗಿದ್ದು, ಪಿ.ಎಸ್ ಶರೀಫ್, ಅಝೀದ್, ಆರಿಫ್ ಮಹಮ್ಮದ್ ಮುಝಾಮಿಲ್, ಸುರಾಕತ್, ನಿಸಾರ್ ಅಹಮ್ಮದ್ ಹಾಗೂ ಜಮಾಲ್ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ವೇಣೂರು ಪೊಲೀಸರು ಎರಡೂ ತಂಡಗಳ ದೂರು ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.