ಉಜಿರೆ: ವಂ. ಜೊಸೇಫ್ ಮಸ್ಕರೇನ್ಹಸ್‌ರವರಿಗೆ ಬೀಳ್ಕೊಡುಗೆ.

ಉಜಿರೆ: 2011 ರಲ್ಲಿ ಕಾಟೀಪಳ್ಳ ಧರ್ಮಕೇಂದ್ರದಿಂದ ವರ್ಗಾವಣೆಗೊಂಡು ಉಜಿರೆ ಸಂತ ಅಂತೋನಿ ಧರ್ಮಕೇಂದ್ರಕ್ಕೆ ಆಗಮಿಸಿ 7 ವರ್ಷಗಳು ತಮ್ಮ ಧಾರ್ಮಿಕ ಸೇವೆಯನ್ನು ನೀಡಿ ಜಾನನುರಾಗಿಯಾಗಿ, ಚರ್ಚ್ ಹಾಗೂ ಶಿಕ್ಷಣ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಪಡಿಸಿ, ಇದೀಗ ಮಂಗಳೂರು ತಾಲೂಕಿನ ಕೆಲರಾಯ್ ಧರ್ಮಕೇಂದ್ರಕ್ಕೆ ಜೂ.8 ರಂದು ವರ್ಗಾವಣೆಗೊಳ್ಳಲಿರುವ ವಂ.ಫಾ| ಜೊಸೇಫ್ ಮಸ್ಕರೇನ್ಹಸ್ ಇವರಿಗೆ ಜೂ.3 ರಂದು ವಿದಾಯ ಸಮಾರಂಭ ಜರಗಿತು.
ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಂ.ಫಾ| ಉದಯ್ ಜೊಸೆಫ್ ಸ್ವಾಗತಿಸಿದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸನ್ಮಾನಿಸಿದರು. ಗೀತಾ ಫೆರ್ನಾಂಡಿಸ್ ಸನ್ಮಾನ ಪತ್ರ ಪಾವತಿಸಿದರು. ಕಾರ್ಯದರ್ಶಿ ವಲೇರಿಯನ್ ರೋಡ್ರಿಗಸ್ ಪ್ರಸ್ತಾವಣೆ ಗೈದರು. ಮಾಜಿ ಉಪಾಧ್ಯಕ್ಷ ಸ್ಟೇನಿ ಪಿಂಟೊ ವಂದಿಸಿದರು. ಮಾಜಿ ಕಾರ್ಯದರ್ಶಿ ಲವಿನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ದಯಳ್‌ಭಾಗ್ ಧರ್ಮಗುರು ವಂ| ಜೊಸೇಫ್ ಮಸ್ಕರೇನ್ಹಸ್‌ರವರ ಮಾತೃಶ್ರೀ ಶ್ರೀಮತಿ ಜುಲಿಯಾನ ಮಸ್ಕರೇನ್ಹಸ್, ಸುಪಿರಿಯರ್ ವಂ.ಫಾ| ಎಡ್ವಿನ್ ಸಿ| ಡೋರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.