ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಮೃತ್ಯು.

ಮೃತ ಪ್ರವೀಣ್ ಪ್ರಶಾಂತ್ ಫೆರ್ನಾಂಡಿಸ್

ಬೆಳ್ತಂಗಡಿ:ಮೂಡಬಿದ್ರೆ ಮಹಾವೀರ ಕಾಲೇಜು ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಜೂ. 3 ರಂದು ಬೆಳಿಗ್ಗೆ  ನಡೆದಿದೆ. ಮೃತಪಟ್ಟ ವ್ಯಕ್ತಿ ಬೆಳ್ತಂಗಡಿ ಸಮೀಪದ ನೈನಾಡು ನಿವಾಸಿ ಪ್ರವೀಣ್ ಪ್ರಶಾಂತ್ ಫೆರ್ನಾಂಡಿಸ್ (27.ವ) ಎಂದು ಗುರುತಿಸಲಾಗಿದೆ.

ಪ್ರವೀಣ್  ರವರು ವೇಣೂರಿನಿಂದ ಮೂಡಬಿದ್ರೆ ಕಡೆಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ,  ಸುರೇಂದ್ರ ಎಂಬವರು ಬೈಕ್ ನಲ್ಲಿ ಸಹ ಪ್ರಯಾಣಿಕ ಪ್ರದೀಪ್ ರವರ ಜೊತೆ ಮೂಡಬಿದ್ರೆ ಕಡೆಯಿಂದ  ವೇಗವಾಗಿ ಚಲಾಯಿಸಿಕೊಂಡು ಬಂದು ಮಹಾವೀರ ಕಾಲೇಜು ಬಳಿ  ಬಲ ಬದಿಯಲ್ಲಿರುವ ವೇಣುಗೋಪಾಲ ಕಾಲೊನಿ ಕಡೆಗೆ ತಿರುಗಿಸಿದಾಗ ಪರಸ್ಪರ ಡಿಕ್ಕಿ ಸಂಭವಿಸಿದೆ. ಪ್ರವೀಣ್ ರವರು ರಸ್ತೆಗೆ ಎಸೆಯಲ್ಪಟ್ಟು ತಲೆ, ಮುಖ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿ, ತಕ್ಷಣ ಅವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸುವ ವೇಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.