HomePage_Banner_
HomePage_Banner_
HomePage_Banner_

ಲಾಯಿಲ: ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ.

ಲಾಯಿಲ:  ಜೂ.3 ರಂದು ಲಾಯಿಲ ಸುಬ್ರಮಣ್ಯ ಸ್ಥಾನಿಕ ಸಭಾಭವನದಲ್ಲಿ ಲಾಯಿಲ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ವತಿಯಿಂದ  ನೂತನ ಶಾಸಕ  ಹರೀಶ್ ಪೂಂಜ ರವರಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ಜೂ.1 ರಂದು ಅಕಾಲಿಕ ಮರಣ ಹೊಂದಿದ ಬಿಜೆಪಿಯ ಕಾರ್ಯಕರ್ತ, ಪ್ರಗತಿ ನಗರದ ರಿಕ್ಷಾ ಚಾಲಕ ಧರ್ಮಣ ಕುಂಬಾರರರಿಗೆ ಮೌನ ಪ್ರಾರ್ಥನೆ ಮೂಲಕ ಶೃದ್ದಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಉಮೇಶ್ ಪರಂಟಾಜೆ, ಲಾಯಿಲ ಗಣೇಶ್ ಗ್ಯಾರೇಜ್ ಮಾಲಕ ರಾಜೇಶ್ ಶೆಟ್ಟಿ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತಗೌಡ ಹಾಗೂ ಲಾಯಿಲ ಬಿಜೆಪಿ ವತಿಯಿಂದ ರೂ. 22 ಸಾವಿರ ಧನಸಹಾಯವನ್ನು ಹಾಗೂ ಲಾಯಿಲ ಪಡ್ಲಾಡಿಯ ನಿವಾಸಿ ಅಸೌಖ್ಯದಿಂದ ಇರುವ ಸುರೇಶ್ ಶೆಟ್ಟಿಯವರಿಗೆ ರೂ. 10 ಸಾವಿರ ಮತ್ತು ಲಾಯಿಲದ ಕ್ಯಾನ್ಸರ್ ಪೀಡಿತ ಚಿತ್ರಾ ಶೆಣೈಯವರಿಗೆ ರೂ. 5 ಸಾವಿರ ಧನಸಹಾಯವನ್ನು ಹಸ್ತಾಂತರಿಸಲಾಯಿತು. ಲಾಯಿಲ ಜೋಗಿ ಕಾಲನಿಯ ಎಂಡೋ ಪೀಡಿತ ಮಗುವಿಗೆ ಮಾಸಾಶನ ಪತ್ರವನ್ನು ಶಾಸಕರ ಮುಖೇನ ಹಸ್ತಾಂತರಿಸಲಾಯಿತು.
ಅಲ್ಲದೆ ಧರ್ಮಣ ಕುಂಬಾರರ ಎರಡು ಮಕ್ಜಳ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ಸಂಪೂರ್ಣವಾಗಿ ಗಣೇಶ್ ಗ್ಯಾರೇಜಿನ ದಿ|ಶೀನ ಶೆಟ್ಟಿ ಟ್ರಸ್ಟ್ ವತಿಯಿಂದ ಮತ್ತು ಲಾಯಿಲ ಬಿಜೆಪಿ ವತಿಯಿಂದ ನೋಡಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.
ಯುವ ನ್ಯಾಯವಾದಿ ಧನಂಜಯ ರಾವ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ.ಎಸ್, ಎ.ಪಿ.ಎಂ.ಸಿ ಸದಸ್ಯರು, ಲಾಯಿಲ ಬಿಜೆಪಿ ಪ್ರಮುಖರಾದ ಈಶ್ವರ ಬೈರ, ತಾ .ಪಂ. ಸದಸ್ಯ  ಸುಧಾಕರ್ ಬಿ.ಎಲ್ , ಗ್ರಾ ಪಂ ಉಪಾಧ್ಯಕ್ಷ  ಗಿರೀಶ್ ಡೋಂಗ್ರೆ, ಪಂಚಾಯತ್ ಸಮಿತಿ ಅಧ್ಯಕ್ಷ  ಮಧುಸೂಧನ್, ಗ್ರಾ.ಪಂ ಅಧ್ಯಕ್ಷೆ ವೀಣಾ ರಾವ್, ನಾವೂರಿನ ಬಿಜೆಪಿ ಪ್ರಮುಖರಾದ ಹರೀಶ್ ಮೋರ್ತಾಜೆ, ಗ್ರಾ. ಪಂ ಸದಸ್ಯರು, ಮಾಜಿ ಗ್ರಾ.ಪಂ.ಸದಸ್ಯರು, ಪಕ್ಷದ ಅನೇಕ ಪ್ರಮುಖರು, ಬೂತ್ ಅಧ್ಯಕ್ಷರುಗಳು, ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.