HomePage_Banner_
HomePage_Banner_
HomePage_Banner_

ಬಂದಾರು: ಕುಂಟಾಲಪಲ್ಕೆ ಶಾಲಾ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು.

Advt_NewsUnder_1

ಬಂದಾರು: ಬಂದಾರು ಗ್ರಾಮದ ಎಂರ್ಬುಡೇಲು ಎಂಬಲ್ಲಿನ ನಿವಾಸಿ ಮೂರನೇ ತರಗತಿ ವಿದ್ಯಾರ್ಥಿ ಕೌಶಿಕ್(8.ವ) ಅವರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜೂ. 2 ರಂದು ಸಂಜೆ ವೇಳೆ ನಡೆದಿದೆ.
ವಾಸಪ್ಪ ಗೌಡ ಮತ್ತು ಯಶೋಧಾ ದಂಪತಿಯ ಎರಡನೇ ಪುತ್ರರಾಗಿರುವ ಕೌಶಿಕ್ ಸಂಜೆ ವೇಳೆಗೆ ಎಂದಿನಂತೆ ಮನೆಯ ಬಳಿ ಇರುವ ನದಿಯ ಕಡೆಗೆ ತೆರಳಿದ್ದರು. ಈ ವೇಳೆ ಎಲ್ಲೋ ಮಳೆಯಾದ ಪರಿಣಾಮ ಅಚಾನಕ್ಕಾಗಿ ಏಕಾಏಕಿ ಒಮ್ಮೆಲೇ ಮಳೆ ನೀರು ಹರಿದು ಬಂದ ಪರಿಣಾಮ ಮುಳುಗಿ ಮೃತಪಟ್ಟಿದ್ದಾರೆಂದು ಕುಟುಂಬದವರು ತಿಳಿಸಿದ್ದಾರೆ.
ಕೌಶಿಕ್ ಬಂದಾರು ಗ್ರಾಮದ ಕುಂಟಾಲಪಲ್ಕೆ ಶಾಲಾ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಕೌಶಿಕ್ ರವರು ವಾಸಪ್ಪ ಗೌಡರ ಮೂರು ಮಕ್ಕಳಲ್ಲಿ ಎರಡನೆಯವರು. ಮೃತರು ಅಣ್ಣ ಕಾರ್ತಿಕ್, ತಂಗಿ ಕಾವ್ಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಬಿಟ್ಟುಕೊಡಲಾಯಿತು. ತಾ.ಪಂ ಸದಸ್ಯ ಪುಂಡಲೀಕ ಯಾನೆ ಕೃಷ್ಣಯ್ಯ ಆಚಾರ್ಯ, ಮಾಜಿ ಸದಸ್ಯ ಮಹಾಬಲ ಗೌಡ, ಪದ್ಮುಂಜ ಸಹಕಾರಿ ಸಂಘದ ಅಧ್ಯಕ್ಷ ಡೀಕಯ್ಯ ಗೌಡ ಮೊದಲಾದ ಪ್ರಮುಖರು ಆಸ್ಪತ್ರೆಗೆ ಮತ್ತು ಮೃತರ ಮನೆಗೆ ಭೇಟಿ ನೀಡಿ ಅಗತ್ಯ ನೆರವು ನೀಡಿದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಕುಂಟಾಲಪಲ್ಕೆ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.