ಬೆಳ್ತಂಗಡಿ: `ಪಾರಸ್ ಪೃಥ್ವಿ ಜ್ಯುವೆಲ್ಲರ್‍ಸ್’ ಶುಭಾರಂಭ

ಬೆಳ್ತಂಗಡಿ : ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಅಪೂರ್ವ ಸಂಗ್ರಹಗಳ ಮಳಿಗೆ `ಪಾರಸ್ ಪೃಥ್ವಿ ಜ್ಯುವೆಲ್ಲರ್‍ಸ್’ ಇದರ ನೂತನ ಮಳಿಗೆಯು ಇಂದು (ಜೂ.1) ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಜಯಶ್ರೀ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯ ಉದ್ಘಾಟನೆಯನ್ನು ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ರವರು ನೇರವೇರಿಸಿರು. ವಿಶೇಷ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,  ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯ ರಾಘವ ಪಡ್ವೆಟ್ನಾಯ, ಮಾಜಿ ಸಚಿನ ಕೃಷ್ಣ ಪಾಲೆಮಾರ್, ಕಟ್ಟಡ ಮಾಲಕ ಯೋಗೀಶ್ ಕುಮಾರ್, ಉದ್ಯಮಿ ರಾಜೇಶ್ ಶೆಟ್ಟಿ, ನವಶಕ್ತಿ ಹಾರ್ಡ್ ವೇರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸತ್ಯೇಂದ್ರ ವರ್ಣೇಕರ್, ಸಂಸ್ಥೆಯ ಸ್ಥಾಪಕಾಧ್ಯಕ್ಷ ಪಾರಸ್ ಮನ್ ದಕ್, ಮ್ಯಾನೇಜಿಂಗ್ ಡೈರೆಕ್ಟರ್ ಸಮರ್ಥ್‌ಲಾಲ್ ದಕ್ ಪೃಥ್ವಿ ಇನ್‌ಫ್ರಾಸ್ಟ್ರಕ್ಚರ್ ಡೈರೆಕ್ಟರ್ ಪದಮ್‌ದಕ್, ಬೆಳ್ತಂಗಡಿ ಶಾಖಾ ಪ್ರಬಂಧಕ ಮನಮೋಹನ್, ಮಾರ್ಕೆಟಿಂಗ್ ಮೆನೇಜರ್ ಶ್ರೀನಿವಾಸ ಪೈ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.