HomePage_Banner_
HomePage_Banner_

ಬೆಂಗಾಲ್ ವಾರಿಯರ್‍ಸ್ ಪ್ರೋ ಕಬಡ್ಡಿ :ಎಸ್‌ಡಿಎಂ ಪದವಿ ವಿದ್ಯಾರ್ಥಿ ಮಿತಿನ್ ಗೌಡ ಆಯ್ಕೆ.

ಬೆಳ್ತಂಗಡಿ : ಅಪ್ಪಟ ಭಾರತೀಯ ಕ್ರೀಡೆಯಾದ ಕಬಡ್ಡಿಗೆ “ಪ್ರೋ ಕಬಡ್ಡಿ” ಮೂಲಕ ಕಾರ್ಪೋರೇಟ್ ಟಚ್ ಸಿಕ್ಕಿ ಕಬಡ್ಡಿ ಕ್ರೀಡೆಯ ಕಂಪು ಅಂತಾರಾಷ್ಟ್ರೀಯ ಮಟ್ಟಕ್ಕೆ ಹಬ್ಬಿದ ಕೀರ್ತಿ ಒಂದೆಡೆಯಾದರೆ ಇದೀಗ ಇದೇ ಕ್ರೀಡೆಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಪದವಿ ವಿದ್ಯಾರ್ಥಿ ಮಿತಿನ್ ಗೌಡ ಆಯ್ಕೆಯಾಗುವುದರ ಮೂಲಕ ತಾಲೂಕಿನ ಕ್ರೀಡಾ ಕ್ಷೇತ್ರದ ಗರಿಮೆ ಎತ್ತಿಹಿಡಿದ್ದಾರೆ.
ಪುತ್ತೂರು ತಾಲೂಕು ಕಡಬ ನಿವಾಸಿ ಅನ್ನಯ್ಯ ಗೌಡ ಮತ್ತು ಪ್ರೇಮಾ ದಂಪತಿ ಪುತ್ರ, ಉಜಿರೆ ಎಸ್‌ಡಿಎಂ ಪದವಿ ಕಾಲೇಜಿನ ವಿದ್ಯಾರ್ಥಿ ಮಿತಿನ್ ಈಗ ಪ್ರೋ ಕಬಡ್ಡಿ ಕ್ಷೇತ್ರದ ಪ್ರತಿಷ್ಠಿತ ಬೆಂಗಾಲ್ ವಾರಿಯರ್‍ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮೆರೆದಿರುವ ಮಿತಿನ್ ಆವರು ಈಗಾಗಲೇ ಶಾಲಾ ಮಟ್ಟದಲ್ಲಿ ರಾಜ್ಯ -ರಾಷ್ಟ್ರ ಮಟ್ಟದವರೆಗೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಳೆದ ಬಾರಿ ಜೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟವನ್ನೂ ಪ್ರತಿನಿಧಿಸಿದ್ದಾರೆ. ಪಿ.ಯು.ಸಿ ಯಿಂದ ಉಜಿರೆಯಲ್ಲಿ ವಿದ್ಯಾಭ್ಯಾಸ ಪೂರೈಸುತ್ತಿರುವ ಅವರಿಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಕ್ರೀಡಾ ನಿರ್ದೇಶಕ ರಮೇಶ್ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ. ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರೂ ಆಗಿದ್ದು, ಎಸ್‌ಡಿಎಂ ಸ್ಪೋಟ್ಸ್ ಕ್ಲಬ್ ಕ್ರೀಡಾ ತರಬೇತುದಾರರಾಗಿರುವ ಕೃಷ್ಣಾನಂದ ರಾವ್ ಮುಂಡಾಜೆ ಅವರು ಅವರಿಗೆ ಕ್ರೀಡಾ ತರಬೇತಿ ನೀಡುತ್ತಿದ್ದಾರೆ.
ಮುಂದಕ್ಕೆ ಅವರು ಬೆಂಗಾಲ್ ವಾರಿಯರ್‍ಸ್ ತಂಡದ ಕೋಚ್, ಮಾಜಿ ಸೈನಿಕರಾಗಿದ್ದು ಭಾರತ ತಂಡದ ಮಾಜಿ ಆಟಗಾರ ಜಗದೀಶ್ ಕುಂಬ್ಲೆ ಅವರ ತರಬೇತಿಯಲ್ಲಿ ಇನ್ನಷ್ಟು ಪಳಗಿ ಪ್ರೋ ಕಬಡ್ಡಿ ಮೂಲಕ ಕಬಡ್ಡಿ ಕ್ರೀಡಾಸಕ್ತರಿಗೆ ಭಾರೀ ಕ್ರೀಡಾ ರಸದೌತಣ ನೀಡಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.