ಲಾಯಿಲ ಬಳಿ ಬೈಕ್‌ಸ್ಕಿಡ್: ಸವಾರ ಮೃತ್ಯು

ಲಾಯಿಲ: ಬೈಕ್ ಸ್ಕಿಡ್ ಸಂಭವಿಸಿ ಬೈಕ್ ಸವಾರ  ಮೃತಪಟ್ಟ ಘಟನೆ ಮೇ.30 ರಂದು ಲಾಯಿಲ ಬಳಿ ನಡೆದಿದೆ.
ಮೇ.30 ರಂದು ರಾತ್ರಿ ಕೇರಳ ಮೂಲದ ಹಸೈನಾರ್( 35.ವ) ಎಂಬವರು ಬೆಳ್ತಂಗಡಿಯಿಂದ ಉಜಿರೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಲಾಯಿಲ ಜಂಕ್ಷನ್ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರವಾದ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.