HomePage_Banner_
HomePage_Banner_
HomePage_Banner_

ಧರ್ಮಸ್ಥಳ: ಕೃಷಿ ಅಧಿಕಾರಿಗಳ ತರಬೇತಿ ಕಾರ್ಯಾಗಾರ.

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕರ್ನಾಟಕ ರಾಜ್ಯದ 148 ಮಂದಿ ಕೃಷಿ ಅಧಿಕಾರಿಗಳ ತರಬೇತಿ ಕಾರ್ಯಾಗಾರವು ಧರ್ಮಸ್ಥಳದ ವಸಂತ್ ಮಹಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಕೃಷಿ ಅಧಿಕಾರಿಗಳು ಶ್ರೀಸಾಮಾನ್ಯರ ಜೊತೆ ಶ್ರೀಸಾಮಾನ್ಯರಾಗಿ ಭೂಮಿ ಮಟ್ಟದಲ್ಲಿ ಇರಬೇಕು. ಆದರೆ ಮನಸ್ಸು ಮಾತ್ರ ಮಣ್ಣಿನ ಜೊತೆ, ಸಾಮಾನ್ಯ ಕೃಷಿಕರು, ಸಾಮಾನ್ಯ ಜನರ ಜೊತೆ ಬೆರೆಯುವ ಮನಸ್ಸು ಇರಬೇಕು, ಕೃಷಿ ಅಧಿಕಾರಿಗಳು ಮಾನವಿಯತೆಯನ್ನು, ಅನುಕಂಪವನ್ನು ಬೆಳೆಸಿಕೊಳ್ಳಬೇಕು. ಸ್ಪಂದಿಸುವ ಕಾರ್ಯಕರ್ತರು ನಾವಾಗಬೇಕು ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಎಚ್.ಮಂಜುನಾಥ್‌ರವರು ಮಾತನಾಡುತ್ತಾ ಪ್ರತಿಯೊಬ್ಬ ಕಾರ್ಯಕರ್ತರು ಸೇವಾ ಮನೋಭಾವದೊಂದಿಗೆ ಕೆಲಸವನ್ನು ಸಮರ್ಪಣಾ ಮನೋಭಾವದಿಂದ ಕೆಲಸವನ್ನು ನಿರ್ವಹಿಸಬೇಕು. ಕೃಷಿ ಅಧಿಕಾರಿಗಳು ಅಧ್ಯಯನ ಶೀಲರಾಗಬೇಕು. ಬೇರೆ ಬೇರೆ ಮಾಧ್ಯಮಗಳಿಂದ ಕೃಷಿಗೆ ಸಂಬಂಧಪಟ್ಟ ವಿಷಯಗಳನ್ನು ಸಂಗ್ರಹಿಸಿದಾಗ ರೈತರಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ. ಎಂದು ಹೇಳಿದರು.
ಯೋಜನೆಯ ಕೃಷಿ ವಿಭಾಗದ ನಿರ್ದೇಶಕ ಮನೋಜ್ ಮಿನೇಜಸ್, ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಶ್ರೀಮತಿ ಮಮತಾ ಹರೀಶ್‌ರಾವ್,  ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಲವ ಕುಮಾರ್, ಕೃಷಿ ಮೇಲ್ವಿಚಾರಕಾದ ಲೋಕೇಶ್,  ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕ  ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.