ಕೊಕ್ಕಡ : ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿಯ ದಿ. ವೆಂಕಪ್ಪ ಗೌಡ ಎಂಬವರ ಮಗ ವೀರಪ್ಪ ಗೌಡ (50.ವ) ಎಂಬವರು ತನ್ನ ಮನೆಯ ಎದುರು ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಗೈದ ಘಟನೆ ಮೇ.28 ರಂದು ಬೆಳಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯು ವಿವಾಹಿತರಾಗಿದ್ದು, ಮೊದಲನೇ ಪತ್ನಿಯಲ್ಲಿ ಮಕ್ಕಳಿಲ್ಲ ಎನ್ನುವ ಕಾರಣದಲ್ಲಿ ಮರು ಮದುವೆ ಆಗಿದ್ದರು ಎನ್ನಲಾಗಿದೆ. ಎರಡನೇ ಪತ್ನಿಯಲ್ಲೂ ಮಕ್ಕಳಿಲ್ಲದ ಕಾರಣ ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಗೈದಿರಬೇಕೆಂದು ಶಂಕಿಸಲಾಗಿದೆ. ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.