ಪ್ರೇರಣಾ ಸೌಹಾರ್ದ ಸಹಕಾರಿಯಿಂದ ರೂ.20 ಸಾವಿರ ಆರ್ಥಿಕ ನೆರವು.

ಬೆಳ್ತಂಗಡಿ: ಹಲವು ವರ್ಷಗಳಿಂದ ಸ್ವ ಸಹಾಯ ಸಂಘ ಪ್ರಾರಂಭಿಸಿ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಯೋಜಿಸಿ ಬಡಕುಟುಂಬಗಳಿಗೆ, ಹಿಂದುಳಿದವರಿಗೆ ಹಾಗೂ ಸಂಕಷ್ಟಕ್ಕೀಡಾದವರಿಗೆ ಸೇವೆಯನ್ನು ಮಾಡುತ್ತಾ ಬಂದಿರುವ ಪ್ರೇರಣಾ ಸ್ವಸಹಾಯ ಸಂಘವು ಕಳೆದ ಒಂದು ವರ್ಷದ ಹಿಂದೆ ಪ್ರೇರಣಾ ಸೌಹಾರ್ದ ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸಿ, ಇನ್ನೊಂದು ಹೆಜ್ಜೆ ಮುಂದೆ ಬಂದು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ.
ಬೆಳ್ತಂಗಡಿಯ ಲೂವಿಸ್ ಲೋಬೋ ರವರು ಅನಾರೋಗ್ಯ ಪೀಡಿತರಾಗಿ ಬಳಲುತ್ತಿದ್ದು, ಮೇ.28 ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಸಂಘದ ಕಛೇರಿಯಲ್ಲಿ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಲ್ಯಾನ್ಸಿ.ಎ.ಫಿರೇರಾ ರವರು ರೂ. 20000/- ಹಣಕಾಸು ನೆರವನ್ನು ಲೂಯಿಸ್ ಲೋಬೋರವರ ಪತ್ನಿ ಶ್ರೀಮತಿ ಜೆಸಿಂತಾ ಮೋನಿಸ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ನಿರ್ದೇಶಕರುಗಳಾದ ಜಾನ್ ಅರ್ವಿನ್ ಡಿಸೋಜ, ಬೆನೆಡಿಕ್ಟ್ ವೇಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಐರಿನ್ ಡಿಸೋಜ, ಗೌರವ ಸಲಹೆಗಾರ ಹಿಲಾರಿ ಮೆಂಡೋನ್ಸಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.